ವಿಟ್ಲ, ಡಿ 12: ಇಲ್ಲಿನ ಸಾಲೆತ್ತೂರು ಆದರ್ಶ ವಿವಿದ್ಧೋದ್ದೇಶ ಸಹಕಾರಿ ಸಂಘದಲ್ಲಿ ಕಳವಿಗೆ ವಿಫಲ ಯತ್ನ ನಡೆಸಿದ ಘಟನೆ ಡಿ .12 ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಬ್ಯಾಂಕ್ ನ ಶಟರ್ ಹಾಗೂ ಗೇಟನ್ನು ಮುರಿದು ಒಳನುಗ್ಗಿದ ಕಳ್ಳರು ಕಳ್ಳತನಕ್ಕೆ ಯತ್ನ ನಡೆಸಿದ್ದಾರೆ. ಬ್ಯಾಂಕ್ ನಲ್ಲಿ ಈ ಘಟನೆ ಎರಡನೇ ಬಾರಿ ಸಂಭವಿಸಿದ್ದು, ಈ ಹಿಂದೆಯೂ ಕಳ್ಳತನದ ಯತ್ನ ನಡೆದಿತ್ತು . ಬ್ಯಾಂಕ್ ದೋಚಲು ವಿಫಲರಾದ ಕಾರಣ ಪಕ್ಕದಲ್ಲಿದ್ದ ಸೆಲೂನ್ ಮತ್ತು ಗೂಡಂಗಡಿಯಿಂದ ಚಿಲ್ಲರೆ ಸಾಮಾನು ಎಗರಿಸಿದ್ದಾರೆ. ಕಳೆದು ಒಂದು ತಿಂಗಳಿನಲ್ಲಿ ಇದು ಎರಡನೇ ಬಾರಿಗೆ ಬ್ಯಾಂಕ್ ದರೋಡೆಗೆ ಯತ್ನಿಸಿರುವ ಪ್ರಕರಣವಾಗಿದೆ. ಘಟನೆ ಬಗ್ಗೆ ವಿಟ್ಲ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.