ಉಪ್ಪಿನಂಗಡಿ, ಡಿ. 21 (DaijiworldNews/AA): ಅಪ್ರಾಪ್ತ ಬಾಲಕಿಯೋರ್ವಳ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡಿದ ಆರೋಪದ ಮೇರೆಗೆ ವ್ಯಕ್ತಿಯೋರ್ವನನ್ನು ಪೊಲೀಸರು ವಶಕ್ಕೆ ಪಡೆದ ಫಟನೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಅಬ್ದುಲ್ ಗಫೂರ್ ಎಂಬ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಕರಣದ ದೂರುದಾರರಾದ ಬೆಳಗಾವಿ ಮೂಲದ ಮಹಿಳೆಯು ತನ್ನ ಗಂಡ ಹಾಗೂ ಅಪ್ರಾಪ್ತ ಪ್ರಾಯದ ಮಗಳೊಂದಿಗೆ ಕೆಲಸದ ನಿಮಿತ್ತ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿರುತ್ತಾರೆ. ಪ್ರಕರಣದ ಆರೋಪಿ ಅಬ್ದುಲ್ ಗಫೂರ್ ಎಂಬಾತನು ದೂರುದಾರರ ಅಪ್ರಾಪ್ತ ಮಗಳಿಗೆ ಜೇನು ಕೃಷಿ ಕಲಿಸುತ್ತೇನೆಂದು ಹೇಳಿದ್ದು, ಅದರಂತೆ ದೂರುದಾರರು ತನ್ನ ಮಗಳನ್ನು 2 ತಿಂಗಳಿಂದ ಆರೋಪಿಯ ಮನೆಯಲ್ಲಿ ಬಿಟ್ಟಿರುತ್ತಾರೆ.
ಸಂತ್ರಸ್ತ ಬಾಲಕಿಯ ಹೆತ್ತವರು ಊರಿಗೆ ತೆರಳಿದ್ದವರು ಡಿ. 19 ರಂದು ಹಿಂತಿರುಗಿ ಬಂದಿದ್ದಾರೆ. ಈ ವೇಳೆ ಬಾಲಕಿಯು ಅಳುತ್ತಾ ಬಂದು, ಡಿ. 2 ರಿಂದ ಆರೋಪಿಯು ಆಕೆಯನ್ನು ನಿರಂತರವಾಗಿ ಅತ್ಯಾಚಾರ ಮಾಡಿರುವುದಾಗಿ ದೂರುದಾರರಿಗೆ ತಿಳಿಸಿರುತ್ತಾಳೆ ಎಂಬುದಾಗಿ ದೂರು ನೀಡಲಾಗಿದೆ.
ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ. ಕ್ರ 118/2025, ಕಲಂ: 115(2), 351(2), 65(1) BNS-2023 4, 6 ಪೋಕ್ಸೋ ಕಾಯ್ದೆ 2012 ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಮುಂದಿನ ಕಾನೂನುಕ್ರಮ ಕೈಗೊಳ್ಳಲಾಗುವುದು.