ಮಂಗಳೂರು, ಡಿ. 21 (DaijiworldNews/AA): ಸಾಮಾನ್ಯವಾಗಿ ಮದುವೆ ಮತ್ತಿತರ ದೊಡ್ಡ ಸಮಾರಂಭ ಎಂದರೆ ಈಗ ಪ್ಲಾಸ್ಟಿಕ್ ಸಹಿತ ಹಲವು ತ್ಯಾಜ್ಯಗಳ ಉತ್ಪಾದನೆಯ ಕೇಂದ್ರ, ಆದರೆ ಇಂತಹ ಅಪವಾದದ ಮಧ್ಯೆಯೇ ಇತ್ತೀಚೆಗೆ ನಗರದಲ್ಲಿ ನಡೆದ ಮದುವೆ ಕೂಟವೊಂದು 'ಝೀರೋ ವೇಸ್ಟ್ ಈವೆಂಟ್' ಪರಿಕಲ್ಪನೆಯಲ್ಲಿ ನಡೆದು ತ್ಯಾಜ್ಯ ಮರುಬಳಕೆಯ ಮೂಲಕ ಹೊಸ ಆಶಯಕ್ಕೆ ಮಾದರಿ ಎನಿಸಿಕೊಂಡಿದೆ.
ಪರಿಸರ ಸಂಬಂಧಿತ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಮಂಡಲ್' ಸಂಸ್ಥೆಯ ಸ್ಥಾಪಕ ಹಾಗೂ ಸಿಇಒ ರೋಶನ್ ರೈ ಹಾಗೂ ಬಯೋ ಫಾರ್ಮೆಟಿಕ್ಸ್ ವಿಜ್ಞಾನಿ ರೋಹಿತ ಅವರ ವಿವಾಹವು ಇತ್ತೀಚೆಗೆ ನಡೆಯಿತು. ಇವರ ಮದುವೆ, ಮೆಹಂದಿ ಸಹಿತ ಎಲ್ಲ ಶುಭಕಾರ್ಯದ ವೇಳೆ ಸೃಷ್ಟಿಯಾದ ಒಣ-ಹಸಿ ಕಸವನ್ನು ತ್ಯಾಜ್ಯವೆಂದು ವರಿಸರಕ್ಕೆ ಎಸೆಯಲಿಲ್ಲ. ಬದಲಾಗಿ ಸಂಪೂರ್ಣ ಮರುಬಳಸಲಾಗಿದೆ.
ಮದುವೆಯ ಎಲ್ಲಾ ಕಾರ್ಯಕ್ರಮಗಳಿಂದ ಸುಮಾರು 1,333 ಕೆಜಿ ತ್ಯಾಜ್ಯ ಸಂಗ್ರಹ ಮಾಡಲಾಗಿದೆ. ಮೆಹಂದಿಯಿಂದ 375 ಕಿಲೋ, ಸಂಗೀತ್ ಕಾರ್ಯಕ್ರಮದಿಂದ 91 ಕಿಲೋ, ಮದುವೆಯಿಂದ 415 ಕಿಲೋ, ಪೂಜಾ ಕಾರ್ಯಕ್ರಮದಿಂದ ಸೃಷ್ಟಿಯಾಗುವ ತ್ಯಾಜ್ಯವನ್ನು ಪಚ್ಚನಾಡಿಯಲ್ಲಿ ಭೂಮಿಯ ಒಳಗೆ ಹಾಕಿ ಮಣ್ಣು ಹಾಕಿ ಮುಚ್ಚುತ್ತಾರೆ. ಆದರೆ ಇಲ್ಲಿ ತ್ಯಾಜ್ಯವನ್ನು ಸಂಪೂರ್ಣ ಮರುಬಳಕೆ ಮಾಡಲಾಗಿದೆ. ಇನ್ನು ಆಮಂತ್ರಣ 445 ಕೆಜಿ ಹಾಗೂ ಅತಿಥಿಗಳ ವಾಸ್ತವ್ಯ ಕೋಣೆಯಿಂದ 7 ಕೆಜಿ ಸಹಿತ ಒಟ್ಟು 1333 ಕೆಜಿ ಒಣ ಹಾಗೂ ಹಸಿ ತ್ಯಾಜ್ಯವನ್ನು ಸಂಗ್ರಹಿಸಲಾಗಿದೆ.
'ಝೀರೋ ವೇಸ್ಟ್ ಈವೆಂಟ್' ಎಂಬ ಬಗ್ಗೆ ಬರೆಯಲಾಗಿತ್ತು ಮತ್ತು ತ್ಯಾಜ್ಯ ನಿರ್ವಹಣೆ ಗಾಗಿ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಪ್ರತ್ಯೇಕವಾಗಿ ಸಂಗ್ರಹವಾದ ಒಣ ಹಾಗೂ ಹಸಿ ತ್ಯಾಜ್ಯವನ್ನು ಮಂಗಳೂರಿನ ಮಂಗಳ ರಿಸೋರ್ಸ್ ಮ್ಯಾನೆಜ್ ಮೆಂಟ್ ಪತ್ರಿಕೆಯಲ್ಲಿಯೇ ಪರಿಸರ ಕಾಳಜಿಯ ಅನಿವಾರ್ಯ ಹೊರತುಪಡಿಸಿ ಪ್ಲಾಸ್ಟಿಕ್ ಬಳಕೆ ಇಲ್ಲದೆ, ಮರು ಬಳಕೆ ಆಗುವ ವಸ್ತುಗಳನ್ನೇ ಅಧಿಕವಾಗಿ ಬಳಸಿ ಯಾವುದೇ ತ್ಯಾಜ್ಯ ಭೂಮಿಗೆ ಸೇರಬಾರದು ಎಂಬ ಆಶಯವನ್ನು ಇಟ್ಟುಕೊಂಡು ನಾವು ಕಾರ್ಯಕ್ರಮ ಆಯೋಜಿಸಿದ್ದೆವು. ಪರಿಸರವನ್ನು ಕಾಪಾಡುವ ಕಾಳಜಿಯಿಂದ ನಮ್ಮದು ಸಣ್ಣ ಪ್ರಯತ್ನ ಎಂದು ರೋಶನ್ ರೈ ಮತ್ತು ರೋಹಿತ ತಿಳಿಸಿದ್ದಾರೆ.
ಸಂಸ್ಥೆಯವರು ಪ್ರತ್ಯೇಕವಾಗಿ ವಿಲೇವಾರಿ ಮಾಡಿದರು. 5-6 ಒಣಕಸವನ್ನು ಸಂಸ್ಥೆಯ ಎಂಆರ್ ಎಫ್ ಘಟಕದಲ್ಲಿ ಮರುಬಳಸಲಾ ಗಿದೆ. ಹಸಿ ಕಸವನ್ನು ಹರ್ಮಿ ಕಂಪೋಸ್ಟ್ ಮೂಲಕ ಗೊಬ್ಬರ ಮಾಡಲಾಗುತ್ತಿದೆ. ದಿನದಲ್ಲಿ ಗೊಬ್ಬರ ರೆಡಿಯಾಗಲಿದೆ.