ಉಡುಪಿ,ಡಿ. 21 (DaijiworldNews/AK): ಅರಣ್ಯ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಸಣ್ಣ ಜಾತಿಯ ಜಿಂಕೆಯಾದ ಅಪರೂಪದ ಇಲಿ ಜಿಂಕೆ (ಬರ್ಕಾ) ಉಡುಪಿಯ ಹಾವಂಜೆ ಗ್ರಾಮದ ಪರಾರಿಯಲ್ಲಿ ಕಾಣಿಸಿಕೊಂಡಿದೆ.

ಹಾವಂಜೆ ಗ್ರಾಮದ ಕೀಳಂಜೆಯ ಪರಾರಿಯ ರಿಂಗ್ ರಸ್ತೆಯ ಬಳಿ ಸಮಾಜಿಕ ಕಾರ್ಯಕರ್ತ ಗಣೇಶರಾಜ್ ಸರಳೇಬೆಟ್ಟು ಪ್ರಯಾಣಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಇಲಿ ಜಿಂಕೆ ಅಡ್ಡ ಬಂದಿದ್ದು, ತಕ್ಷಣವೇ ಅರಣ್ಯ ಪಾಲಕ ದೇವರಾಜ್ ಪಾಣಗೆ ಮಾಹಿತಿ ನೀಡಿದರು.
ನಂತರ ಆ ಪ್ರಾಣಿ ಸುರಕ್ಷಿತವಾಗಿ ಹತ್ತಿರದ ಅರಣ್ಯ ಪ್ರದೇಶಕ್ಕೆ ಮರಳಿತು.