ಕಾರ್ಕಳ, ಡಿ. 29 (DaijiworldNews/TA): ಸೋಮವಾರ ಬೆಳಿಗ್ಗೆ ನಿಟ್ಟೆ ಪಂಚಾಯತ್ ಎದುರುಗಡೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ ಸಂಭವಿಸಿದ್ದು, ಪಾದಚಾರಿಯೋರ್ವರು ಗಂಭೀರ ಸ್ಥಿತಿಯಲ್ಲಿ ಗಾಯಗೊಂಡಿದ್ದಾರೆ.








2 ಕಾರು ಹಾಗೂ ಮೊಟ್ಟೆ ಸಾಗಾಟದ ಲಾರಿಯೊಂದು ಜಖಂಗೊಂಡಿದೆ. ಅಪಘಾತ ತೀವ್ರತೆಗೆ ಪಾದಾಚಾರಿಯೊಬ್ಬನಿಗೆ ವಾಹನ ತಾಗಿ ಆತನ ಕಾಲು ಸಂಪೂರ್ಣ ನಜ್ಜುಗುಜ್ಜಾಗಿದೆ. ಮೊಟ್ಟೆಯ ವಾಹನ ರಸ್ತೆಯ ಮಧ್ಯದಲ್ಲಿ ಪಲ್ಟಿ ಹೊಡೆದಿರುವಿದರಿಂದ ಕೆಲ ಹೊತ್ತುಗಳ ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.