ಉಡುಪಿ, ಡಿ. 30 (DaijiworldNews/TA): ಡ್ರಗ್ ಮಾಫಿಯಾ ರಾಜ್ಯವನ್ನು ಸುತ್ತುವರೆದಿದೆ. ಬೆಂಗಳೂರಿನಲ್ಲಿ ಡ್ರಗ್ಸ್ ಮಾಫಿಯಾ ಪತ್ತೆ ಮಾಡಿದ ಮಹಾರಾಷ್ಟ್ರ ಪೊಲೀಸರು ಈ ಸರ್ಕಾರವನ್ನು ತಡೆಯುವ ಕೆಲಸ ಮಾಡಿಲ್ಲ ಎಂದು ಬಿಜೆಪಿ ವಿಪಕ್ಷ ನಾಯಕ ಆರ್ ಅಶೋಕ್ ಹೇಳಿಕೆ ನೀಡಿದ್ದಾರೆ.

ಉಡುಪಿಯಲ್ಲಿ ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿ ಈ ಬಾರಿ ಹೊಸ ವರ್ಷ ಆಚರಣೆ ಅಲ್ಲ. ಈ ಬಾರಿ ಡ್ರಗ್ಸ್ ಸೆಲೆಬ್ರೇಶನ್. ಮಹಾರಾಷ್ಟ್ರ ಪೊಲೀಸರು ಬೆಂಗಳೂರಲ್ಲಿ ರೈಡ್ ಮಾಡಿ, ಕೋಟ್ಯಂತರ ರೂಪಾಯಿ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಇದು ನಮ್ಮ ಪೊಲೀಸರಿಗೆ ಯಾಕೆ ಗೊತ್ತಾಗಲ್ಲ?. ಇದಕ್ಕಿಂತ ಅವಮಾನ ಏನಿದೆ?. ಮಹಾರಾಷ್ಟ್ರ ಪೂಲೀಸರು ಎರಡು ಮಹತ್ವದ ಕಾರ್ಯಚರಣೆ ನಡೆಸಿದ್ದಾರೆ.
ಈ ಸರ್ಕಾರಕ್ಕೆ ನಾಚಿಕೆ ಆಗಬೇಕು, ಮಾನ ಮರ್ಯಾದೆ ಇದೆಯಾ?. ಕರ್ನಾಟಕದಲ್ಲಿ ಇಂಟಲಿಜೆನ್ಸ್ ಸತ್ತು ಹೋಗಿದೆಯಾ?, ಕರ್ನಾಟಕ ಪೊಲೀಸರ ಸಹಾಯ ಪಡೆದು ಕಾರ್ಯಚರಣೆ ಮಾಡಿದ್ದು ಎನ್ನುತ್ತಿರಿ. ನಿಮಗೆ ಯಾಕೆ ಈ ಮಾಫಿಯಾ ಗೊತ್ತಾಗಿಲ್ಲ?, ಗೃಹ ಸಚಿವರಿಗೆ ಕಾಮನ್ ಸೆನ್ಸ್ ಇಲ್ವಾ?, ಇದು ಬೇಜವಾಬ್ದಾರಿ ಸರ್ಕಾರ, ಮಂಗಳೂರು ಬೆಂಗಳೂರು ಜೈಲಿನಲ್ಲಿ ಡ್ರಗ್ ಪೆಡ್ಲರುಗಳು ತುಂಬಿದ್ದಾರೆ. ಪೊಲೀಸರೇ ಕಳ್ಳರಂತೆ ಮಾಡುತ್ತಾರೆ, ಇದನ್ನು ನಿಯಂತ್ರಿಸಲು ಈ ಸರ್ಕಾರಕ್ಕೆ ಧಮ್ ತಾಕತ್ತು ಇಲ್ಲ ಎಂದು ವ್ಯಂಗ್ಯವಾಡಿದರು.