ಬಂಟ್ವಾಳ, ಡಿ. 30 (DaijiworldNews/TA): ಕಡು ಬಡವರಿಗೆ ಆಶಾದೀಪವಾಗಿರುವ ಯುವ ಉದ್ಯಮಿ ರೊನಾಲ್ಡ್ ಮಾರ್ಟೀಸ್ ನೇತೃತ್ವದಲ್ಲಿ ಸಜೀಪ ದಸರಾ ಶತಮಾನೋತ್ಸವ ಸಮಿತಿಯ ವತಿಯಿಂದ ಹಾಗೂ ಸಹೃದಯಿ ದಾನಿಗಳ ಸಹಾಯದಿಂದ ನಿರ್ಮಾಣಗೊಂಡ ಮನೆಯ ಕೀಲಿ ಕೈ ಹಸ್ತಾಂತರ ಕಾರ್ಯಕ್ರಮ ನಡೆಯಿತು.




ಶ್ರೀ ಶಾರದಾ ಪೂಜಾ ಮಹೋತ್ಸವ ಸುಭಾಷ್ ಯುವಕ ಮಂಡಲ (ರಿ.) ಸುಭಾಷ್ ನಗರ ಹಾಗೂ ಶಾರದಾ ಪೂಜಾ ಮಹೋತ್ಸವದ 100ನೇ ವರ್ಷದ ಸಜೀಪ ದಸರಾ ಮಹೋತ್ಸವದ ಅಂಗವಾಗಿ ಅಸಹಾಯಕರಿಗೆ “ಆಸರೆ ಯೋಜನೆ” ಅಡಿಯಲ್ಲಿ ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ಕೊಳಕೆ ದಿ| ನೀಲಪ್ಪ ಮೂಲ್ಯರ ಪತ್ನಿ ಸುಮನ ಇವರ ಕುಟುಂಬಕ್ಕೆ ಸುಮಾರು 3 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಿದ್ದು ಸೋಮವಾರ ಅದರ ಗೃಹಪ್ರವೇಶ ನಡೆಯಿತು.
ಬಹಳಷ್ಟು ಮಂದಿಗೆ ಸರಿಯಾದ ಮನೆಗಳಿಲ್ಲದೇ ಕುಸಿದು ಬಿದ್ದಿರುವ ಗುಡಿಸಲಿನಲ್ಲಿ ಭಯದಿಂದ ಬದುಕುವುದನ್ನು ಮನಗಂಡ ದುಬೈ ಉದ್ಯಮಿ ರೊನಾಡ್ ಮಾರ್ಟೀಸ್ ಈ ಮನೆ ನಿರ್ಮಾಣಕ್ಕೆ ದೇಣಿಗೆ ರೂಪದಲ್ಲಿ 2 ಲಕ್ಷ ರೂಪಾಯಿಯನ್ನು ನೀಡಿದ್ದು ಇವರ ಜೊತೆಗೆ ಸ್ಥಳೀಯ ದಾನಿಗಳು ಹಾಗೂ ಊರಿನ ಸಂಘ ಸಂಸ್ಥೆಯವರು ಕೈಜೋಡಿಸಿದ್ದು ಮನೆಯ ಗೃಹಪ್ರವೇಶ ಕಾರ್ಯಕ್ರಮ ನಡೆಯಿತು.