ಉಳ್ಳಾಲ, ಡಿ. 30 (DaijiworldNews/TA): ದೇರಳಕಟ್ಟೆಯಲ್ಲಿ ನಡೆಯಲಿರುವ ವಿಷನ್ ಕುಡ್ಲ ಟಸ್ಟ್ ಪ್ರಸ್ತುತಪಡಿಸುವ ಹಗ್ಗಜಗ್ಗಾಟ ಪಂದ್ಯಾಟದ ಆಮಂತ್ರಣ ಪತ್ರಿಕೆಯನ್ನು ಕುತ್ತಾರು ದೆಕ್ಕಾಡುವಿನ ಕೊರಗಜ್ಜನ ಆದಿಸ್ಥಳದಲ್ಲಿ ಬಿಡುಗಡೆಗೊಳಿಸಲಾಯಿತು.

ಮುನ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮಹಾಬಲ ಟಿ ದೆಪ್ಪೆಲಿಮಾರ್ ಮಾತನಾಡಿ, 2026ರ ಜನವರಿ 25ರಂದು ಕೆಎಸ್ ಹೆಗ್ಡೆ ಆಸ್ಪತ್ರೆಯ ಮುಂಭಾಗದ ಮೈದಾನದಲ್ಲಿ ಹಗ್ಗಜಗ್ಗಾಟ ಪಂದ್ಯಾಟವು ನಡೆಯಲಿದೆ. ಪಂದ್ಯಾಟದಲ್ಲಿ ನಾವೆಲ್ಲರೂ ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದರು. ಇದೇ ವೇಳೆ ಹರೇಕಳ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಮಹಾಬಲ ಹೆಗ್ಡೆ, ಪ್ರಧಾನ ಆರ್ಚಕರಾದ ಬಾಲಕೃಷ್ಣ ಮೂಲ್ಯ ಕಂಪ, ವಿಷನ್ ಕುಡ್ಲ ಟ್ರಸ್ಟ್ ಅಧ್ಯಕ್ಷರಾದ ಜಿತೇಂದ್ರ ರಾವ್ ಪಂದ್ಯಾಟಕ್ಕೆ ಶುಭಹಾರೈಸಿದರು.
ಇನ್ನು ಈ ಸಂದರ್ಭದಲ್ಲಿ ವಿಷನ್ ಕುಡ್ಲ ಟಸ್ಟ್ ಗೌರವ ಸಲಹೆಗಾರರಾದ ದೇವಿಪ್ರಸಾದ್ ಶೆಟ್ಟಿ, ಉಪಾಧ್ಯಕ್ಷರಾದ ರೂಪೇಶ್ ಬಿ, ಕಾರ್ಯದರ್ಶಿಯಾದ ಸಂತೋಷ್ ಕುಮಾರ್, ಕೋಶಾಧಿಕಾರಿಯಾದ ರಾಮಚಂದ್ರ ಗಟ್ಟಿ, ಸಹಕಾರ್ಯದರ್ಶಿಗಳಾದ ಪ್ರಸನ್ನ, ಪ್ರವೀಣ್ ಟಿ ಮಯ್ಯ, ಸುದೇಶ್ ಕುಮಾರ್, ಮಿಥುನ್, ಉದಯ್ ಶೆಟ್ಟಿ ಸೇರಿದಂತೆ ಸದಸ್ಯರುಗಳು ಉಪಸ್ಥಿತರಿದ್ದರು.