ಕಾಸರಗೋಡು, ಜ.01 (DaijiworldNews/AK):ಬೇಳ ದರ್ಬೆತ್ತಡ್ಕ ಎಂಬಲ್ಲಿ ನ ಪೆಟ್ರೋಲ್ ಪಂಪ್ ಸಮೀಪ ಅಗ್ನಿ ಅನಾಹುತ ಉಂಟಾಗಿದ್ದು ಸ್ವಲ್ಪದರಲ್ಲೇ ಭಾರೀ ದುರಂತ ತಪ್ಪಿದೆ. ಎಕರೆಗಟ್ಟಲೆ ಪೊದೆ,ಮರಗಳು ಹೊತ್ತಿ ಉರಿದಿದೆ.

ಹುಲ್ಲಿಗೆ ತಗಲಿದ ಬೆಂಕಿ ಕ್ಷಣಾರ್ಧದಲ್ಲಿ ಹರಡಿದ್ದು, ನಾಗರಿಕರು ನಂದಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಬಳಿಕ ಅಗ್ನಿ ಶಾಮಕ ದಳದ ಸಿಬಂದಿಗಳಿಗೆ ಮಾಹಿತಿ ನೀಡಲಾಯಿತು.
ಸಮೀಪದ ಪೆಟ್ರೋಲ್ ಬಂಕ್ ಸಮೀಪ ತನಕ ಬೆಂಕಿ ತಲಪಿದ್ದು, ಅಗ್ನಿ ಶಾಮಕ ದಳದ ಸಿಬಂದಿಗಳು ಹಾಗೂ ನಾಗರೀಕರು ಬೆಂಕಿಯನ್ನು ನಂದಿಸಿ ಸಂಭಾವ್ಯ ದುರಂತವನ್ನು ತಪ್ಪಿಸುವಲ್ಲಿ ಯಶಸ್ವಿಯಾದರು .ಸುಮಾರು 20 ಎಕರೆಯಷ್ಟು ಗುಡ್ಡಗಳಿಂದ ಕೂಡಿದ ಸ್ಥಳಕ್ಕೆ ಬೆಂಕಿ ಪಸರಿಸಿದೆ. ಎರಡೂವರೆ ಗಂಟೆಗೂ ಅಧಿಕ ಸಮಯ ಶ್ರಮ ವಹಿಸಿ ಬೆಂಕಿಯನ್ನು ಹತೋಟಿಗೆ ತರಲಾಯಿತು.