ಉಡುಪಿ , ಜ.01 (DaijiworldNews/ AK): ಹೆಜ್ಜೆ ಗೆಜ್ಜೆ ಉಡುಪಿ-ಮಣಿಪಾಲದ ಸಹ ನಿರ್ದೇಶಕಿಯಾದ ವಿದುಷಿ ದೀಕ್ಷಾ ರಾಮಕೃಷ್ಣ (ಭರತನಾಟ್ಯ ಕಲಾವಿದೆ ಮತ್ತು ಝೀ ಕನ್ನಡ ಸ ರೆ ಗ ಮ ಪ ಸೀಸನ್ 13 ರ ಫೈನಲಿಸ್ಟ್, 2 ಬಾರಿ ಈ ಟಿವಿ ಎದೆ ತುಂಬಿ ಹಾಡುವೆನು ವಿನ್ನರ್ , ಚಲನಚಿತ್ರ ಹಿನ್ನೆಲೆಗಾಯಕಿ , ಆಕಾಶವಾಣಿ ಬಿ ಹೈ ಗ್ರೇಡ್ ಕಲಾವಿದರು, ರಾಜ್ಯ ರಾಷ್ಟ್ರ ಮಟ್ಟದ ಸ್ಕಾಲರ್ಶಿಪ್ ಪಡೆದವರು) ಅವರಿಂದ ಶ್ರೀ ಪುರಂದರದಾಸರ ರಚನೆಗಳಿಗೆ ಏಕವ್ಯಕ್ತಿ ಗಾನ ನೃತ್ಯಾರ್ಪಣೆ ನಡೆಯಲಿದೆ ಮತ್ತು ಅವರು ಈ ಪ್ರಯತ್ನ ವನ್ನು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಗೆ ಸೇರಿಸಲು ಪ್ರಯತ್ನಿಸುತ್ತಿದ್ದಾರೆ.


ಈ ಕಾರ್ಯಕ್ರಮವು ಉಡುಪಿಯ ಎಂ ಜಿ ಎಂ ಕಾಲೇಜ್ ನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಉದ್ಘಾಟನೆಯು ದಿನಾಂಕ 3 ಜನವರಿ 202

6 ಬೆಳಿಗ್ಗೆ 8.30 ಕ್ಕೆ ನಡೆಯಲಿದ್ದು ಕಾರ್ಯಕ್ರಮಕ್ಕೆ ಡಾ. ಮನಿಷ್ ವಿಶ್ನೋಯ್ ಏಷಿಯಾ ಹೆಡ್, ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್, ವಿದುಷಿ ಯಶಾರಾಮಕೃಷ್ಣ , ಡೈರೆಕ್ಟರ್ ಹೆಜ್ಜೆಗೆಜ್ಜೆ , ಡಾ.ಶರಣಬಸವ, ಸಂಸ್ಥಾಪಕ ಅಧ್ಯಕ್ಷರು, ಶ್ರೀ ಬಸವ ಟ್ರಸ್ಟ್ , ಬಳ್ಳಾರಿ ಶ್ರೀ ರಾಮಕೃಷ್ಣ ಹೆಗಡೆ, ಕಾರ್ಯದರ್ಶಿ ಹೆಜ್ಜೆಗೆಜ್ಜೆ ಇವರು ಉಪಸ್ಥಿತರಿದ್ದಾರೆ.
ಬೆಳಿಗ್ಗೆ 9.00 ಗಂಟೆಯಿಂದ ವಿದುಷಿ ದೀಕ್ಷಾ ರಾಮಕೃಷ್ಣ (ಸಹ ನಿರ್ದೇಶಕರು ಹೆಜ್ಜೆ ಗೆಜ್ಜೆ ಉಡುಪಿ, ಮಣಿಪಾಲ) ಅವರಿಂದ ನವೀನ ರೀತಿಯ ಏಕವ್ಯಕ್ತಿ ಪುರಂದರ ಗಾನ ನರ್ತನ ಪ್ರಾರಂಭ ಗೊಳ್ಳುತ್ತದೆ. ಹಿಮ್ಮೇಳದಲ್ಲಿ ಹಾರ್ಮೋನಿಯಂ ನಲ್ಲಿ ವಿದ್ವಾನ್ ಸತೀಶ್ ಭಟ್, ಹೆಗ್ಗಾರ್ ವಿದ್ವಾನ್ ಶಶಿಕಿರಣ್ , ಮಣಿಪಾಲ ತಬಲಾದಲ್ಲಿ ವಿದ್ವಾನ್ ಮಾಧವಾಚಾರ್ಯ ಉಡುಪಿ, ವಿದುಷಿ ವಿಜೇತಾ ಹೆಗಡೆ, ಕೆರೆಮನೆ ಸಹಕರಿಸಲಿದ್ದಾರೆ.
ಅದೇ ದಿನ ಸಂಜೆ 5:00 ಗಂಟೆಗೆ ಪುರಂದರ ಗಾನ ನರ್ತನ ಸಮಾರೋಪ ಸಮಾರಂಭ ನಡೆಯಲಿದೆ ಈ ಕಾರ್ಯಕ್ರಮಕ್ಕೆ ಶಿಬರೂರು ವೇದವ್ಯಾಸ ತಂತ್ರಿ, ದಿವಾನರು, ಪಲಿಮಾರುಮಠ ಉಡುಪಿ, ಯಶಪಾಲ್ ಪಿ ಸುವರ್ಣ , ಶಾಸಕರು ಉಡುಪಿ ವಿಧಾನಭಾ ಕ್ಷೇತ್ರ, ರಘುಪತಿ ಭಟ್, ಮಾಜಿ ಶಾಸಕರು ಉಡುಪಿ ವಿಧಾನಸಭಾ ಕ್ಷೇತ್ರ , ಡಾ. ಮನಿಷ್ ವಿಶ್ನೋಯ್ ಏಷಿಯಾ ಹೆಡ್, ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್, ವಿದ್ವಾನ್ ಮಧೂರು ಪಿ ಬಾಲಸುಬ್ರಮಣ್ಯಂ, ಹಿರಿಯ ಸಂಗೀತ ಗುರುಗಳು ಉಡುಪಿ, ವಿದ್ವಾನ್ ಶ್ರೀ ರಾಘವೇಂದ್ರ ಆಚಾರ್ಯ, ಮಣಿಪಾಲ, ಆಕಾಶವಾಣಿ ಕಲಾವಿದರು ಡಾ. ಎಂ ವಿಶ್ವನಾಥ್ ಪೈ ಉಪ ಪ್ರಾಂಶುಪಾಲರು, ಎಂ ಜಿ ಎಂ ಕಾಲೇಜ್ ಉಡುಪಿ ಡಾ . ಶರಣಬಸವ, ಸಂಸ್ಥಾಪಕ ಅಧ್ಯಕ್ಷ , ಶ್ರೀ ಬಸವ ಟ್ರಸ್ಟ್,ಬಳ್ಳಾರಿ ಇವರು ಭಾಗವಹಿಸಲಿದ್ದಾರೆ.
ತದನಂತರ ಹೆಜ್ಜೆಗೆಜ್ಜೆ ವಿದ್ಯಾರ್ಥಿಗಳಿಂದ ನೃತ್ಯಕಾರ್ಯಕ್ರಮ ನಡೆಯಲಿದೆ. ದಾಸ–ಪದ ವೈಭವಂ ನ ಸಮಾರೋಪ ಸಮಾರಂಭವು ಜನವರಿ 4, ಭಾನುವಾರ ಸಂಜೆ 4:00 ರಿಂದ ನೂತನ ರವೀಂದ್ರ ಮಂಟಪ, ಎಂಜಿಎಂ ಕಾಲೇಜು, ಉಡುಪಿ ಇಲ್ಲಿ ನಡೆಯಲಿದೆ. ಅಂದು ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿದುಷಿ ಗೌರಿ ಸಾಗರ್, ಬೆಂಗಳೂರು ಅವರಿಂದ ವಿಷಯಾಧಾರಿತ ಏಕವ್ಯಕ್ತಿ ನೃತ್ಯ - "ಶ್ರೀ ವಿನೋದ" ವಿದ್ವಾನ್ ಯೋಗೇಶ್ ಕುಮಾರ್ ಮತ್ತು ವಿದುಷಿ ಸ್ನೇಹಾ ನಾರಾಯಣ್ , ಬೆಂಗಳೂರು ಇವರಿಂದ ಯುಗಳ ನೃತ್ಯ, ವಿದುಷಿ ಪ್ರತಿಮಾ ಶ್ರೀಧರ್ ಮತ್ತು ವಿದ್ವಾನ್. ಶ್ರೀಧರ ಹೊಳ್ಳ ಭರತಾಂಜಲಿ, ಮಂಗಳೂರು, ವಿದುಷಿ ಲಕ್ಷ್ಮಿ ಗುರುರಾಜ್ ರವರ ಲಕ್ಷ್ಮಿಗುರುರಾಜಸ್ ಎನ್ಎನ್ಯು, ಉಡುಪಿ, ವಿದುಷಿ ವೀಣಾ ಸಾಮಗ ರಾಧಾಕೃಷ್ಣ ನೃತ್ಯನಿಕೇತನ, ಉಡುಪಿ ವಿದ್ವಾನ್ ಸುಧೀರ್ ರಾವ್- ವಿದುಷಿ. ಮಾನಸಿ ಸುಧೀರ್ ನೃತ್ಯನಿಕೇತನ ಕೊಡವೂರು, ವಿದುಷಿ ಯಶಾ ರಾಮಕೃಷ್ಣ,ಹೆಜ್ಜೆ ಗೆಜ್ಜೆ" ಉಡುಪಿ ಮಣಿಪಾಲ ಈ ಎಲ್ಲ ಸಂಸ್ಥೆಗಳ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ.