ಉಡುಪಿ,ಡಿ 12 : ಪರೇಶ್ ಮೇಸ್ತಾ ನಿಗೂಡ ಸಾವುನ್ನು ಖಂಡಿಸಿ ರಾಜ್ಯದ್ಯಾಂತ ಡಿ. 13 ಹಾಗೂ 14 ರಂದು ವಿಶ್ವ ಹಿಂದೂ ಪರಿಷತ್ ಭಜರಂಗ ದಳ ಪ್ರತಿಭಟನೆಗೆ ಕರೆ ನೀಡಿದೆ. ಈ ಬಗ್ಗೆ ವಿಶ್ವ ಹಿಂದೂ ಪರಿಷತ್ ಮುಖಂಡ ಗೋಪಾಲ್ ಜಿ ಉಡುಪಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾತನಾಡಿದ್ರು, ಐ ಸಿ ಸ್ ಮಾದರಿಯ ರಾಕ್ಷಸಿ ಪ್ರವೃತ್ತಿಯ ಜಿಹಾದಿಗಳು ಹೊನ್ನಾವರದಲ್ಲಿ ಇದ್ದಾರೆ ಎನ್ನುವುದಕ್ಕೆ ಪರೇಶ್ ಮೆಸ್ತಾ ಅವರ ಕೊಲೆ ಸಾಕ್ಷಿಯಾಗಿದೆ. ಮರಣೋತ್ತರ ಪರೀಕ್ಷೆಯ ವರದಿಗಳು ಪರಮೇಶ್ ಮೆಹ್ತಾ ಅವರ ಸಾವು ಸಹಜ ಎಂದು ವ್ಯಾಖಾನಿಸಿರುವುದು ರಾಜಕೀಯ ಪ್ರೇರಿತವಾಗಿದೆ. ಇದು ಸಹಜ ಸಾವು ಖಂಡಿತಾ ಅಲ್ಲ. ಇದು ವ್ಯವಸ್ಥಿತ ಸಂಚು ರೂಪಿಸಿ ಮಾಡಿದ ಕೊಲೆ. ಈ ಕುರಿತು ವಸ್ತುನಿಷ್ಠ ತನಿಖೆಯನ್ನು ಸರಕಾರ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೇ ಹೊನ್ನಾವರದ ಗುಡ್ ಲಕ್ ಹೋಟೆಲ್ ಮಾಲೀಕ ಆಜಾದ್ ಅಣ್ಣಿಗೆರೆ ಕೆಲವರಿಗೆ ಕುಮ್ಮಕ್ಕು ನೀಡುತ್ತಿದ್ದು, ಕೂಡಲೇ ಬಂಧಿಸಬೇಕು ಎಂದರು.