ಮಂಗಳೂರು, ಜು 13 (Daijiworld News/MSP): ಉದ್ಯೋಗಕ್ಕಾಗಿ ಕುವೈಟ್ಗೆ ತೆರಳಿ ಅಲ್ಲಿ ಸೂಕ್ತ ಉದ್ಯೋಗ, ಸಂಬಳ, ಸೌಲಭ್ಯಗಳಿಲ್ಲದೆ ಸಂಕಷ್ಟಕ್ಕೆ ಒಳಗಾಗಿ ಭಾರತೀಯರಲ್ಲಿ ಇಬ್ಬರಿಗೆ ಪಾಸ್ಪೋರ್ಟ್, ವೀಸಾ ಹಸ್ತಾಂತರಿಸಲಾಯಿತು.
ಮಂಜೇಶ್ವರ ಮೂಲದ ಅಭಿಷೇಕ್ ಮತ್ತು ಉತ್ತರ ಪ್ರದೇಶದ ಪಂಕಜ್ ಅವರಿಗೆ ಕುವೈತ್ ನಲ್ಲಿರುವ ಉದ್ಯಮಿ ಮೋಹನ್ ದಾಸ್ ಕಾಮತ್ ಮತ್ತು ಇಳಂಗೋವನ್ ಟಿಕೆಟ್ ಪ್ರಾಯೋಜಿಸಿದ್ದು, ಇದನ್ನು ಸಂತ್ರಸ್ತರಿಗೆ ಹಸ್ತಾಂತರಿಸಿದರು. ಬಂಟರ ಸಂಘ ಕುವೈಟ್ನ ಅಧ್ಯಕ್ಷ ಗುರುಪ್ರಸಾದ್ ಹೆಗ್ಡೆ, ಉಪಾಧ್ಯಕ್ಷ ರಕ್ಷಕ್ ಶೆಟ್ಟಿ, ಅಬೂಬಕ್ಕರ್ ಸಿದ್ದಿಕಿ ಉಪಸ್ಥಿತರಿದ್ದರು.
ಜು.17ರಂದು 19 ಮಂದಿ ಮಂಗಳೂರು ಮೂಲದ ಸಂತ್ರಸ್ತರು ಹಂತ ಹಂತವಾಗಿ ವಾಪಸಾಗಲಿದ್ದಾರೆ. ಇದಕ್ಕೆ ಬೇಕಾದ ಎಲ್ಲಾ ಸಿದ್ದತೆಗಳು ನಡೆದಿವೆ ಎನ್ನಲಾಗಿದೆ. ಇನ್ನುಳಿದ ಭಾರತೀಯರ ವಾಪಸಾತಿ ಪ್ರಕ್ರಿಯೆಗಳು ನಡೆಯುತ್ತಿವೆ.