ಮಂಗಳೂರು ಡಿ : ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಕೊಲೆ ಹೆಚ್ಚಾಗುತ್ತಿದೆ. ಇದಕ್ಕೆ ಇತ್ತೀಚಿನ ಹೊಸ ಸೇರ್ಪಡೆ ಪರೇಶ್ ಮೆಸ್ತರ ಸಾವು. ಅದರೂ ರಾಜ್ಯ ಸರ್ಕಾರದ ಮಾತ್ರ ಕಣ್ಣು ಮುಚ್ಚಿ ಕುಳಿತಿದೆ. ಈ ಹಿಂದೆ ಹಲವರು ಬಾರಿ ಬಿಜೆಪಿ ಕಾರ್ಯಕರ್ತರ ಹಾಗೂ ಹಿಂದೂಗಳ ಹತ್ಯೆಯನ್ನು ನಿಯಂತ್ರಿಸಲು ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ಸರ್ಕಾರಕ್ಕೆ ಹಲವಾರು ಮನವಿಯನ್ನು ಸಲ್ಲಿದರೂ ಅವುಗಳೆಲ್ಲವೂ ವಿಫಲವಾಗಿವೆ ಎಂದು ಸಂಸದ ನಳೀನ್ ಕುಮಾರ್ ಕಟೀಲ್ ವಿಷಾದ ವ್ಯಕ್ತಪಡಿಸಿದರು. ನಗರದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಪರೇಶ್ ಮೆಸ್ತಾ ಕೊಲೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದೆ ತೆರೆಮರೆಯಲ್ಲಿಯೇ ಮುಚ್ಚಿ ಹಾಕುವ ಪ್ರಯತ್ನ ನಡೆಸ್ತಾ ಇದೆ. ಪರೇಶ್ ಮೆಸ್ತಾ ಕೊಲೆಯಾದ ಒಂದು ದಿನಗಳ ಬಳಿಕ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಇನ್ನು ಸಾವಿನ ಬಗ್ಗೆ ಅಧಿಕಾರಿಗಳು ಕೂಡಾ ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂದು ಕಿಡಿಕಾರಿದರು. ಪರೇಶ್ ಮೆಸ್ತ ಕೊಲೆ ತನಿಖೆಯನ್ನು ಶೀಘ್ರವೇ ಎನ್ಐಎ ಹಸ್ತಾಂತರಿಸಬೇಕು, ಎಂದು ಇದೇ ವೇಳೆ ಒತ್ತಾಯಿಸಿದರು. ಮುಂದಿನ ವಾರದಲ್ಲಿ ಬಿಜೆಪಿಯಿಂದ ಹೊನ್ನಾವರದಲ್ಲಿ ಪ್ರತಿಭಟನೆ ನಡೆಸಲು ಯೋಜನೆ ಹಾಕಿಕೊಂಡಿದ್ದು ಬಳಿಕ ಅದನ್ನು ರಾಜ್ಯದಾದ್ಯಂತ ವಿಸ್ತಾರಿಸುತ್ತೇವೆ ಎಂದರು.
ಇದೇ ವೇಳೆ ಸಚಿವ ರಮಾನಾಥ ರೈ ನೇತೃತ್ವದಲ್ಲಿ ಆಯೋಜಿಸಿರುವ ಸಾಮರಸ್ಯದ ನಡಿಗೆ ಬಗ್ಗೆ ವ್ಯಂಗ್ಯವಾಡಿದ ಅವರು ಸಚಿವ ರೈ ಅಧಿಕಾರದ ಆಸೆಯಿಂದ ರಾಜಕೀಯ ಪ್ರೇರಿತರಾಗಿ ಹಾಗೂ ಒಂದು ವರ್ಗವನ್ನು ತೃಪ್ತಿ ಪಡಿಸಲು ಈ ಯಾತ್ರೆಯನ್ನು ಕೈಗೊಂಡಿದ್ದಾರೆ. ಸಿಪಿಐಎಂ ಕೇರಳದಲ್ಲಿ ಹಲವಾರು ಕೊಲೆ ನಡೆಸಿ ಹಾಗೂ ಗೂಂಡಗಿರಿಯಿಂದ ರಾಜ್ಯಭಾರ ಮಾಡುತ್ತಿದೆ. ನಡಿಗೆಯಲ್ಲಿ ಸಿಪಿಐಎಂ ಕೂಡಾ ಭಾಗವಹಿಸಿದ್ದು ಕೇರಳ ಮಾದರಿಯ ಸರ್ಕಾರವನ್ನು ಜಿಲ್ಲೆಯನ್ನು ಜಾರಿಗೆ ತರಲು ಸಚಿವ ರೈ ಯೋಚಿಸುತ್ತಿದ್ದಾರೆ ? . ನಿಜಕ್ಕೂ ಜಿಲ್ಲೆಯಲ್ಲಿ ಸೌಹಾರ್ದತೆಯನ್ನು ಬಯಸಿದರೆ, ಬಂಟ್ವಾಳಕ್ಕೆ ಮಾತ್ರ ಯಾಕೆ ಸಾಮರಸ್ಯ ಯಾತ್ರೆ ಮೀಸಲಿಟ್ಟಿದ್ದು, ? ಬಂಟ್ವಾಳದ ಜನತೆಗೆ ಮಾತ್ರ ಉಸ್ತುವಾರಿ ಸಚಿವರಾಗಿದ್ದಾರೆಯೇ? ಇವೆಲ್ಲ ಪ್ರಶ್ನೆಗಳಿಗೆ ಅವರೇ ಉತ್ತರಿಸಬೇಕು. ಸಚಿವರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಬಗ್ಗೆ ನಿಜವಾದ ಕಾಳಜಿ ಇದ್ದಿದ್ದೆ ಆದರೆ ಮಂಗಳೂರುನಿಂದ ಸಂಪಾಜೆ ತನಕ ಸಾಮರಸ್ಯ ಯಾತ್ರೆ ಕೈಗೊಳ್ಳಬೇಕಿತ್ತು ಎಂದರು. ಸಚಿವ ರೈ ಯಾತ್ರೆ ಮಾಡಿ ಸಮಯ ಹಾಳು ಮಾಡುವುದರ ಬದಲು ಡ್ರಗ್ ಮಾಫಿಯಾ ನಿಯಂತ್ರಿಸಲು ಅದಿಕಾರಿಗಳೊಂದಿಗೆ ಸಭೆ ನಡೆಸಿ ಸೂಕ್ತ ಕ್ರಮಕ್ಕೆ ಪ್ರಯತ್ನಿಸಬಹುದಾಗಿತ್ತು ಎಂದು ತಿಳಿಸಿದರು . ಇದೇ ವೇಳೆ ಸಂಜೀವ ಮಠಂದೂರು ,ಬ್ರಿಜೇಶ್ ಚೌಟಾ, ಕಿಶೋರ್ ರೈ, ಹರೀಶ್ ಪೂಂಜಾ, ಹರಿಕೃಷ್ಣ ಬಂಟ್ವಾಳ ಮುಂತಾದವರು ಉಪಸ್ಥಿತರಿದ್ದರು.