ಮಲ್ಪೆ, ಜು13(Daijiworld News/SS): ಮಲ್ಪೆ ಸಮುದ್ರ ತೀರದಲ್ಲಿ ಈಜಲು ಹೋದ ಯುವಕನೋರ್ವ ನೀರುಪಾಲಾದ ಘಟನೆ ಬೆಳಕಿಗೆ ಬಂದಿದೆ.
ಮಲ್ಪೆ ಬೀಚ್ನಲ್ಲಿ ಸಮುದ್ರದ ಅಲೆಯ ರಭಸಕ್ಕೆ ಸಿಲುಕಿ ಚನ್ನಪಟ್ಟಣದ ನಿವಾಸಿ ದೀಪಕ್(19) ಎಂಬುವರು ಸಮುದ್ರ ಪಾಲಾಗಿದ್ದಾನೆ.
ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ದಡದಲ್ಲಿ ಅಲೆಗಳ ಸ್ಥಿತಿ ಭಯಂಕರವಾಗಿದೆ ಎಂದು ಮೀನುಗಾರರು, ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ದಡದಲ್ಲಿ ಭಾರೀ ಗಾತ್ರದಲ್ಲಿ ಸಮುದ್ರದ ಅಲೆಗಳು ಅಪ್ಪಳಿಸುತ್ತಿವೆ. ಬೀಚ್ನಲ್ಲಿ ಎಚ್ಚರ ತಪ್ಪಿದರೆ ಅಪಘಾತ ಸಂಭವಿಸುತ್ತದೆ. ವಾರಾಂತ್ಯದ ಸರಣಿ ರಜೆ ಆದ್ದರಿಂದ ಬೀಚ್ನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದೆ. ಈ ಬಗ್ಗೆ ಲೈಫ್ಗಾರ್ಡ್, ಪೊಲೀಸ್ ಸಿಬ್ಬಂದಿಗಳು ಸಾಕಷ್ಟು ಮನವಿ ಮಾಡುತ್ತಿದ್ದರೂ ಪ್ರವಾಸಿಗರು ಎಚ್ಚರಿಕೆಯನ್ನು ಪಾಲಿಸುತ್ತಿಲ್ಲ ಎನ್ನಲಾಗಿದೆ.