ಬೆಳ್ತಂಗಡಿ, ಜು 14 (Daijiworld News/MSP): ಮಂಗಳೂರಿಗೆ ಉದ್ಯೋಗಕ್ಕೆಂದು ತೆರಳಿದ ಯುವತಿಯೋರ್ವಳು ನಾಪತ್ತೆಯಾಗಿರುವ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿ ತಾಲೂಕಿನ ನಿಟ್ಟಡೆಗ್ರಾಮದ ಪಂಡಿಜೆ ನಿವಾಸಿ ನಾಗೇಶ್ ಎಂ.ಕೆ. ಅವರ ಪುತ್ರಿಕೀರ್ತನಾ (19) ನಾಪತ್ತೆಯಾದವಳು. ಕಳೆದ ಮೇ 13ರಂದು ಮಂಗಳೂರಿನ ಕಂಪೆನಿಯೊಂದರಲ್ಲಿಉದ್ಯೋಗ ಲಭಿಸಿದೆ ಎಂದು ಮನೆಯಿಂದ ಹೋದವಳು ಬಳಿಕ ಒಂದು ತಿಂಗಳುಗಳ ಕಾಲ ಮನೆಯವರೊಂದಿಗೆ ಸಂಪರ್ಕದಲ್ಲಿದ್ದಳು. ಆ ಬಳಿಕ ಮೊಬೈಲ್ ಸ್ವಿಚ್ಡ್ ಆಫ್ಆಗಿದ್ದು, ಮನೆಯವರ ಸಂಪರ್ಕಕ್ಕೆ ಸಿಗಲಿಲ್ಲ ಎನ್ನಲಾಗಿದೆ. ಅಪರಿಚಿತ ಮಹಿಳೆಯೊಬ್ಬರು ನಾಗೇಶ್ ಅವರಿಗೆ ದೂರವಾಣಿ ಕರೆ ಮಾಡಿ ನಿಮ್ಮ ಪುತ್ರಿ ಮದುವೆಯಾಗಿ ಚಿಕ್ಕಮಗಳೂರಿನಲ್ಲಿ ಇರುವುದಾಗಿ ತಿಳಿಸಿದ್ದಾರೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಲಾಗಿದೆ. ಪಿಯುಸಿ ವಿದ್ಯಾಭ್ಯಾಸ ಮಾಡಿರುವ ಕೀರ್ತನಾ ಗೋಧಿ ಮೈಬಣ್ಣ ಹೊಂದಿದ್ದಾಳೆ. ಕನ್ನಡ, ತುಳು ಬಲ್ಲವಳಾಗಿದ್ದಾಳೆ.
ಇವಳ ಮಾಹಿತಿ ದೊರೆತಲ್ಲಿ ವೇಣೂರು ಪೊಲೀಸ್ಠಾಣೆ , ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕರು ಅಥವಾ ಕಂಟ್ರೋಲ್ರೂಂ ಗೆ ಮಾಹಿತಿ ನೀಡಬಹುದಾಗಿದೆ.