ಕಾರ್ಕಳ, ಜು 14 (Daijiworld News/MSP):ಅಜಾತ್ರಶತ್ರು, ಸಮಾಜ ಸೇವಕ, ಸರಳ ಸಜ್ಜನಿಕೆಗೆ ಪಾತ್ರರಾಗಿರುವ ಮಾಜಿಶಾಸಕ ಎಚ್.ಗೋಪಾಲಭಂಡಾರಿಯವರ ಅದರ್ಶ,ಸತ್ಕಾರ್ಯ, ಸೇವೆಯನ್ನು ಮುಂದುವರಿಸಿಕೊಂಡು ಅದನ್ನು ಕಾರ್ಯಕರ್ತಗೊಳ್ಳಿಸಿದ್ದಾಗ ಮಾತ್ರ ಅವರ ಆತ್ಮಕ್ಕೆ ಶಾಂತಿದೊರಕಲು ಸಾಧ್ಯವೆಂದು ಮಾಜಿಸಚಿವ ವಿನಯಕುಮಾರ್ ಸೊರಕೆ ಅಭಿಪ್ರಾಯಪಟ್ಟರು.
ಮಂಜುನಾಥ ಪೈ ಸಭಾಂಗಣದಲ್ಲಿ ಆಯೋಜಿಸಿದ ಮಾಜಿಶಾಸಕ ಎಚ್.ಗೋಪಾಲಭಂಡಾರಿಯವರಿಗೆ ಶ್ರದ್ದಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ಕಾರ್ಕಳ ಕ್ಷೇತ್ರದ ಆಗು ಹೋಗುಗಳನ್ನು ಬಗ್ಗೆ ಅವರಲ್ಲಿ ಮಾಹಿತಿ ಇತ್ತಲ್ಲದೇ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಕಾಳಜಿ ಹೊಂದಿದ್ದರು. ಭ್ರಚ್ಟಾಚಾರ, ಆಡಂಬರ ಇಲ್ಲದ ಜನಸಾಮಾನ್ಯರ ನೆರವಿಗೆ ಮುಂದಾಗುತ್ತಿದ್ದರು. ಜನಪರ ಹೋರಾಟದಲ್ಲಿ ಭಾಗಿಯಾಗಿದ್ದ ಅವರು ಭೂಮಸೂದೆ ಸಂದರ್ಭದಲ್ಲಿ 22,000 ಸಾವಿರ ಮಂದಿಗೆ ಭೂ ಒದಗಿಸಿಸುವಲ್ಲಿ ನೆರವಾಗಿದ್ದರು. ಪ್ರಾಮಾಣಿಕವಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿದ್ದರು. ಪಕ್ಷದ ನಿಷ್ಠೆಯಿಂದಾಗಿ ತನ್ನ ಸಂಪಾದನೆಯನ್ನು ಧಾರೆ ಎರೆದಿದ್ದರು ಎಂದು ನೆನಪಿಸಿಕೊಂಡರು.
ಮಾಜಿ ಸಚಿವ ಯು.ಆರ್. ಸಭಾಪತಿ ಮಾತನಾಡಿ, ಅಂದಿನ ರಾಜಕೀಯದಲ್ಲಿ ತಾನು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಯುವ ಕಾಂಗ್ರೆಸ್ನ ಜಿಲ್ಲಾ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಸಂಘಟನೆಗೆ ಬೆನ್ನೆಲುಬಾಗಿದ್ದವರಲ್ಲಿ ಮೂಡಬಿದ್ರಿಯ ಅಭಯಚಂದ್ರ ಜೈನ್ ಹಾಗೂ ಕಾರ್ಕಳದ ಗೋಪಾಲಭಂಡಾರಿಯವರಾಗಿದ್ದರು. ಸಮಾಜಕ್ಕೆ ಅವರು ನೀಡಿದ ಕೊಡುಗೆ ಅಪಾರವಾಗಿದೆ. ಯುವಪಡೆಯೇ ಅಂದು ಅವರಿಬ್ಬರಲ್ಲಿತ್ತು. ಶ್ರೀಮಂತ ವಿರುದ್ಧ ಬಡವರ ಪರವಾಗಿ ಹೋರಾಟ ನಡೆಸಿದ್ದರು. ಅವರೊಬ್ಬರು ಸೌಜನ್ಯವ್ಯಕ್ತಿಯಾಗಿದ್ದರು. ಜಿಲ್ಲಾ ಪರಿಷತ್ತ್ಗೆ ಹೋಗುವಾಗ ಅಜಂಡಾ ಕಲಿಕೆ ಮಾಡದೇ ಹೋಗುತ್ತಿರಲಿಲ್ಲ ಎಂದು ನೆನಪಿಸಿಕೊಂಡ ಅವರು ಮತ್ತೇ ಗೋಪಾಲಭಂಡಾರಿಯವರು ಕ್ಷೇತ್ರದ ಪ್ರತಿನಿಧಿಯನ್ನಾಗಿ ಕಾಣುವ ಆಸೆ ಇತ್ತಾದರೂ ವಿಧಿಲೀಲೆಯು ಅದಕ್ಕೆ ಅವಕಾಶ ನೀಡಲಿಲ್ಲ ಎಂದರು.
ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಭೂಮಸೂದೆ ಜಾರಿಗೊಂಡ ಸಂದರ್ಭದಲ್ಲಿ ಜಾತಿ,ಮತ, ಭೇದವಿಲ್ಲದೇ ಎಲ್ಲಾ ಜನೆತೆಗೆ ಸಹಾಯ ಮಾಡಿದರು. ವೀರಪ್ಪ ಮೊಯಿಲಿ ಅಭಿಮಾನಿಯಾಗಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ಪಕ್ಷದ ನಿಷ್ಠೆಯಿಂದ ಕೆಲಸ ಮಾಡಿ ಶಾಸಕನಾಗಿದ್ದರು. ಬಡವರ ಧ್ವನಿಯಾಗಿದ್ದರು. ಆ ಸಂದರ್ಭದಲ್ಲಿ ಉತ್ತಮ ಮಾತುಗಾರಿಕೆಯಿಂದ ವಿಧಾನಸಭೆಯಲ್ಲಿ ಗಮನಸೆಳೆದಿದ್ದರು. ತನ್ನ ಅಧಿಕಾರವಧಿಯಲ್ಲಿ ಅಹಂಕಾರವಿರಲ್ಲಿಲ್ಲ. ಕಾರ್ಯಕರ್ತರಿಗೆ, ಅಧಿಕಾರಿ ವರ್ಗದವರಿಗೆ ಬೈದವರಲ್ಲ. ಅಂತಹ ಮಹಾಚೇತನ ನಮ್ಮಂದ ದೂರವಾಗಿದ್ದಾರೆ. ಅವರ ಕ್ಷೇತ್ರದಲ್ಲಿ ಪಕ್ಷದ ಬಲವರ್ಧನೆಗೆ ನಾನು ಸಹಕಾರಿಯಾಗಿ ೧೫ ದಿನಗಳಿಗೊಮ್ಮೆ ಇಲ್ಲಿಗೆ ಅಗಮಿಸುತ್ತೇನೆಂದರು.
ಬಿಲ್ಲವ ಸಂಘದ ಮುಂದಾಳು ಡಿ.ಆರ್.ರಾಜು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ.ಗಫೂರ್, ಜಿಲ್ಲಾ ಮಾಜಿ ಉಪಕಮಿಷನರ್ ಪ್ರಭಾಕರ ಶರ್ಮ ಅವರು ಮಾಜಿಶಾಸಕ ಎಚ್.ಗೋಪಾಲಭಂಡಾರಿಯವರ ಗುಣಗಾನ ಮಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶೇಖರ್ ಮಡಿವಾಳ ಸ್ವಾಗತಿಸಿ, ಪ್ರಸ್ತಾವನೆಗೈದರು. ವಕ್ತಾರ ಬಿಪಿನ್ಚಂದ್ರಪಾಲ್ ನಕ್ರೆ ನಿರೂಪಿಸಿದರು. ಜಿಲ್ಲಾ ಕಾಂಗ್ರೆಸ್ನ ಉಪಾಧ್ಯಕ್ಷ ಮುನಿಯಾಲು ಉದಯಕುಮಾರ್ ಶೆಟ್ಟಿ, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಂಜುನಾಥ ಪೂಜಾರಿ, ಶಾಮ್ ಶೆಟ್ಟಿ, ಸುಧಾಕರ ಕೋಟ್ಯಾನ್, ಮಾಲಿನಿ ಶೆಟ್ಟಿ, ನವೀನ್ ಸುವರ್ಣ, ಸುಧಾಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.