ಮಂಗಳೂರು, ಜು 14 (Daijiworld News/SM): ಕರ್ನಾಟಕ ರಾಜಕೀಯ ಬೆಳವಣಿಗೆಯ ಹಿನ್ನಲೆಯಲ್ಲಿ ಸಚಿವ ರೇವಣ್ಣ ಡಿಢೀರನೆ ಕರಾವಳಿಯಲ್ಲಿ ಟೆಂಪಲ್ ರನ್ ನಡೆಸಿದ್ದಾರೆ, ತುಳುನಾಡಿನ ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದಾದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಧಾನಕ್ಕೆ ಸಚಿವ ರೇವಣ್ಣ ಇಂದು ಸಂಜೆ ಭೇಟಿ ನೀಡಿದ್ದಾರೆ. ಆದರೆ ದೇವಳದಲ್ಲಿ ಪೂಜೆ ಮುಗಿಸಿದ ಸಚಿವರು, ಮಾಧ್ಯಮದ ವಿರುದ್ಧ ಹರಿಹಾಯ್ದಿದ್ದಾರೆ.
ದೇವಳದಲ್ಲಿ ಪೂಜೆ ಮುಗಿಸಿ ಬಂದ ಸಚಿವರನ್ನು ಮಾಧ್ಯಮ ಪ್ರತಿನಿಧಿಗಳು ಮಾತನಾಡಿಸಲು ಮುಂದಾಗಿದ್ದು ಆದರೆ ತಾಳ್ಮೆಯಿಲ್ಲದ ಸಚಿವ ರೇವಣ್ಣ ವರದಿಗಾರರು ಅಲ್ಲಿ ಹೋಗಿದ್ದೆ ತಪ್ಪು ಎನ್ನುವ ರೀತಿಯಲ್ಲಿ ವರ್ತಿಸಿದ್ದಾರೆ.
ಸಚಿವ ರೇವಣ್ಣ ದೇವಳದಲ್ಲಿ ಪೂಜೆ ಸಲ್ಲಿಸುತ್ತಿದ್ದ ಸಂಧರ್ಭ ಮಾಧ್ಯಮದವರು ವೀಡಿಯೋ ಚಿತ್ರಿಕರಣ ನಡೆಸುತ್ತಿದ್ದು ಆ ಸಂಧರ್ಭ ವರದಿಗಾರರ ಮೇಲೆ ಅವಾಚ್ಯ ಶಬ್ದಗಳನ್ನು ಬಳಕೆ ಮಾಡಿ ನಿಂದಿಸಿದ್ದಾರೆ. ತಾನು ಕಟೀಲು ಅಮ್ಮನವರ ಸನ್ನಿಧಿಯಲ್ಲಿ ನಿಂತಿದ್ದೇನೆ ಎಂಬುದನ್ನೇ ಮರೆತು ‘----ನನ್ನ ಮಗನೇ....ನಾಚಿಕೆಯಾಗೋದಿಲ್ವ’ ಎಂದು ಮಾಧ್ಯಮ ಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಂಡು ಅನುಚಿತವಾಗಿ ವರ್ತಿಸಿದ್ದಾರೆ.
ಕರ್ನಾಟಕ ರಾಜಕೀಯ ಬೆಳವಣಿಗೆಯ ಹಿನ್ನಲೆಯಲ್ಲಿ ಸಚಿವ ರೇವಣ್ಣ ಡಿಢೀರನೆ ಕರಾವಳಿಯಲ್ಲಿ ಪ್ರಸಿದ್ಧ ಕ್ಷೇತ್ರಗಳಿಗೆ ಭೇಟಿ ನೀಡಿದ್ದಾರೆ.ತುಳುನಾಡಿನ ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದಾದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಧಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.