ಮಂಗಳೂರು, ಜು 14 (Daijiworld News/SM): ಕರ್ನಾಟಕ ರಾಜ್ಯ ಹಿರಿಯರ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಮಂಗಳೂರಿನ ಪ್ರದೀಪ್ ಕುಮಾರ್ ಆಚಾರ್ಯ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
ಕರ್ನಾಟಕ ರಾಜ್ಯ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್-2019 ಸ್ಪರ್ಧಾಕೂಟವನ್ನು ಜುಲೈ 13 ಹಾಗೂ 14ರಂದು ಭದ್ರಾವತಿಯಲ್ಲಿ ಆಯೋಜನೆ ಮಾಡಲಾಗಿತ್ತು. 83 ಕೆ.ಜಿ. ವಿಭಾಗದಲ್ಲಿ ಪ್ರದೀಪ್ ಆಚಾರ್ಯ ಚಿನ್ನ ಗೆದ್ದುಕೊಂಡಿದ್ದಾರೆ. ಈ ಸ್ಪರ್ಧಾಕೂಟದಲ್ಲಿ ಒಟ್ಟಾರೆಯಾಗಿ 770 ಕೆ.ಜಿ. ಭಾರ ಎತ್ತುವ ಮೂಲಕ ಪ್ರದೀಪ್ ಚಿನ್ನದ ಕಿರೀಟ ಧರಿಸಿದ್ದಾರೆ.
ಇನ್ನು ಇಷ್ಟು ಮಾತ್ರವಲ್ಲದೆ, ಕರ್ನಾಟಕದ ಬಲಿಷ್ಟ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪ್ರದೀಪ್ ಪಾತ್ರರಾಗಿದ್ದಾರೆ. ಇವರ ಈ ಸಾಧನೆಯ ಹಿಂದೆ ಕೋಚ್ ಸತೀಶ್ ಕುಮಾರ್ ಅವರ ಅವಿರತ ಶ್ರಮವಿದೆ.
ಇನ್ನು ಈ ವರ್ಷ ಕೆನಡಾದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿರುವ ಕಾಮನ್ ವೆಲ್ತ್ ನ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲೂ ಕೂಡ ಪ್ರದೀಪ್ ಭಾಗವಹಿಸಲಿದ್ದು, ಮಂಗಳೂರಿಗರಿಗೆ ಇದು ಹೆಮ್ಮೆಯ ವಿಚಾರವಾಗಿದೆ.