ಕುಂದಾಪುರ, ಜು 16 (Daijiworld News/MSP): ಕೋಟದಲ್ಲಿ ಆರು ತಿಂಗಳ ಹಿಂದೆ ರಾತ್ರೋ ರಾತ್ರಿ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ ಯತೀಶ್ ಕಾಂಚನ್ ಹಾಗೂ ಭರತ್ ಜೋಡಿ ಕೊಲೆ ಪ್ರಕರಣದ 9ನೇ ಆರೋಪಿ ಜಿಲ್ಲಾ ಪಂಚಾಯಿತಿ ಸದಸ್ಯ ರಾಘವೇಂದ್ರ ಕಾಂಚನ್ ಬಾರಿಕೆರೆಗೆ ರಾಜ್ಯ ಉಚ್ಛ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ.
ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಾಲಯ ಸಂಖ್ಯೆ 25ರಲ್ಲಿ ಮಂಗಳವಾರ ಒಂಭತ್ತನೇಯ ಪ್ರಕರಣವನ್ನಾಗಿ ಕೈಗೆತ್ತಿಕೊಂಡ ನ್ಯಾಯಮೂರ್ತಿ ಸುನಿಲ್ ದತ್ತ್ ಯಾದವ್ ಆರೋಪಿ ಪರ ವಾದವನ್ನು ಆಲಿಸಿದ ಬಳಿಕ ರಾಘವೆಂದ್ರ ಬಾರಿಕೆರೆಗೆ ಶರತ್ತು ಬದ್ಧ ಜಾಮೀನು ನೀಡಿದ್ದಾರೆ ಎಂದು ತಿಳಿದು ಬಂದಿದೆ. ಇದೇ ಸಂದರ್ಭ ಪೊಲೀಸ್ ಪೇದೆ, ಪ್ರಕರಣದ ಆರೋಪಿ ವೀರೇಂದ್ರನ ಜಾಮೀನು ಅರ್ಜಿಯನ್ನು ವಾಪಾಸ್ಸು ಪಡೆಯುವಂತೆ ನ್ಯಾಯಾಧೀಶರು ಆದೇಶಿಸಿದ ಹಿನ್ನಲೆಯಲ್ಲಿ ವೀರೇಂದ್ರನ ಜಾಮೀನು ಅರ್ಜಿ ತಿರಸ್ಕೃತಗೊಂಡಂತಾಗಿದೆ.