ಉಡುಪಿ, ಜು 16 (DaijiworldNews/SM): ಉಡುಪಿ ಜಿಲ್ಲಾ ಬಿಜೆಪಿ ನಗರಸಭಾ ಸದಸ್ಯರಾದ ಯೊಗೀಶ್ ಸಾಲ್ಯಾನ್ ಅವರನ್ನು ಯಾವುದೇ ಕಾರಣಕ್ಕೂ ಉಡುಪಿ ಬಿಜೆಪಿ ಬೆಂಬಲಿಸುವುದಿಲ್ಲ ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರದ ಹೆಗ್ಡೆ ತಿಳಿಸಿದ್ದಾರೆ.
ಹಲ್ಲೆಗೊಳಗಾಗಿ ಉಡುಪಿ ಜಿಲ್ಲಾ ಅಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವ ಉಡುಪಿ ನಗರಸಭೆಯ ಆರೋಗ್ಯ ಅಧಿಕಾರಿ ಪ್ರಸನ್ನ ಅವರನ್ನು ಭೇಟಿ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಮ್ಮ ನಗರಸಭಾ ಸದಸ್ಯರು ಮಾಡಿದ ಕೃತ್ಯ ಅಕ್ಷೇಪಾರ್ಹವಾಗಿದೆ. ಅವರನ್ನು ಯಾವುದೇ ಕಾರಣಕ್ಕೂ ಉಡುಪಿ ಜಿಲ್ಲಾ ಬಿಜೆಪಿ ಯೋಗೀಶ್ ಅವರನ್ನು ಬೆಂಬಲಿಸುವುದಿಲ್ಲ. ಯೋಗೀಶ್ ಅವರು ತೋರಿರುವ ವರ್ತನೆ ಸರಿಯಿಲ್ಲ. ಅವರು ಈ ರೀತಿ ಮಾಡಬಾರದಿತ್ತು ಎಂದು ಮಟ್ಟಾರು ಹೇಳಿದರು.
ಈ ಬಗ್ಗೆ ಪಕ್ಷದ ಸಭೆ ಕರೆಯಲಾಗಿದ್ದು, ಸಭೆಯಲ್ಲಿ ಮುಂದಿನ ನಿರ್ಧಾರವನ್ನು ಕೈಗೊಳ್ಳಲಾಗುವುದೆಂದು ಮಟ್ಟಾರು ತಿಳಿಸಿದ್ದಾರೆ. ಹಾಗೂ ನೊಂದ ಅಧಿಕಾರಿಗೆ ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ" ಎಂದು ಇದೇ ವೇಳೆ ಅವರು ತಿಳಿಸಿದ್ದಾರೆ.