ಮಂಗಳೂರು, ಜ. 10 (DaijiworldNews/ AK): ಬಟ್ಟಾರಬೆಟ್ಟು-ಅಳಪೆ- ಪಡೀಲ್ನ ಗ್ರೀನ್ವ್ಯೂ ಅಂಗನವಾಡಿ ಕೇಂದ್ರವು ತುಳುಕೂಟ ಥೈಲ್ಯಾಂಡ್ನ ಅಮೂಲ್ಯ ಸಂಪೂರ್ಣವಾಗಿ ಪುನರ್ನವೀಕರಣಗೊಂಡಿದ್ದು, ಇದರ ಹಸ್ತಾಂತರ ಕಾರ್ಯಕ್ರಮವು ಫೋಷಕರು, ಹಳೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಯಶಸ್ಸಿಯಾಗಿ ನಡೆಯಿತು.












ಕಾರ್ಯಕ್ರಮವನ್ನು ತುಳುಕೂಟ ಥೈಲ್ಯಾಂಡ್ ಅಧ್ಯಕ್ಷರಾದ ವಿನಯ್ ರೈ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಶ್ರೀ ಶಕ್ತಿ ಮಹಿಳೆಯರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಶುಭಾರಂಭವಾಯಿತು. ಅಂಗನವಾಡಿ ಶಿಕ್ಷಕಿ ಸುರೇಖಾ ಅವರು ಅತಿಥಿಗಳನ್ನು ಸ್ವಾಗತಿಸಿದರು. ನಾರಾಯಣ ಚೌಟ, ರಾಜಾರಾಮ್ ರೈ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಕಲಾ ಚೇತನ್, ಕಲಾ ಸಾಮ್ರಾಟ್ ಬಿರುದಾಂಕಿತ ಚಲನಚಿತ್ರ ನಟ, ಚೇತನ ರೈ ಹಾಗೂ ಪ್ರಶಾಂತಿ ರೈ ಅವರು ಅತಿಥಿಗಳಾಗಿ ಉಪಸ್ಥಿತರಿದ್ದರು. ಚೇತನ ರೈ ಅವರು ಕಾರ್ಯಕ್ರಮದ ಹಿನ್ನಲೆ ಹಾಗೂ ಉದ್ದೇಶವನ್ನು ವಿವರಿಸಿದರು.
ತುಳುಕೂಟ ಥೈಲ್ಯಾಂಡ್ ಅಧ್ಯಕ್ಷರಾದ ವಿನಯ್ ರೈ ಅವರು ಮಾತನಾಡಿ, ತುಳುಕೂಟದ ಸಮಾಜಮುಖಖಿ ಕಾರ್ಯಯೋಜನೆಗಳು ವಿದ್ಯಾದಾನ ಮತ್ತು ಅನ್ನದಾನದ ಮಹತ್ವವನ್ನು ವಿವರಿಸಿ ಶಿಕ್ಷಣ ಹಾಗೂ ಅನ್ನಸೇವೆ ಸಮಾಜದ ಬಲವಾದ ಅಡಿಪಾಗಳೆಂದು ಹೇಳಿದರು. ತುಳುಕೂಟದ ಸದಸ್ಯ ಮೈಕಲ್ ವೇಗಸ್ ಅವರು ಅಂಗನವಾಡಿ ಕೇಂದ್ರವನ್ನು ದತ್ತು ಪಡೆದ ಹಿನ್ನಲೆ ಹಾಗೂ ನಡೆದ ಪುನರ್ನವೀಕರಣ ಕಾರ್ಯಗಳ ವಿವರವನ್ನು ನೀಡಿದರು.