ಬಂಟ್ವಾಳ ಸೆ13: ಇಲ್ಲಿನ ಸೋರ್ನಾಡ್ ನ ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ. ಕಳವಾದ ವಸ್ತುಗಳ ಬಗ್ಗೆ ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಿದ್ದು, ತಕ್ಷಣ ಸ್ಥಳಕ್ಕಾಗಿಮಿಸಿದ ಪೋಲಿಸರು ಪರಿಶೀಲನೆ ನಡೆಸಿದ್ದಾರೆ.
ಬಂಟ್ವಾಳದ ಕಢೇಶಿವಾಲಯ ದೇಗುಲಕ್ಕೆ ನುಗ್ಗಿ 5 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ನಗರದು ದೋಚಿರುವ ಬೆನ್ನಲ್ಲೆ ಎರಡು ದಿನದ ಅವಧಿಯೊಳಗೆ ಬಂಟ್ವಾಳ ತಾಲೂಕಿನಲ್ಲಿ ಮಗದೊಂದು ಪ್ರಕರಣ ನಡೆದಿರೋದು ಅಲ್ಲಿನ ಸ್ಥಳೀಯರನ್ನು ಆತಂಕಕ್ಕೀಡು ಮಾಡಿದೆ. ತಾಲೂಕಿನಲ್ಲಿ ವೃತ್ತಿಪರ ಕಳ್ಳರು ಬಾಲ ಬಿಚ್ಚಿರುವ, ಹಾಗೂ ಅಂತರಾಜ್ಯ ಕಳ್ಳರು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ