ಕಾಸರಗೋಡು, ಡಿ 14 : ಕಂಪ್ಯೂಟರ್ ವಿದ್ಯಾರ್ಥಿನಿಯ ಮೃತದೇಹ ಮನೆಯ ಸಮೀಪದ ಬಾವಿಯೊಳಗೆ ನೇಣು ಬಿಗಿದು ಆತ್ಮಹತೈಗೈದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮುಳ್ಳೇರಿಯ, ಪಾತನಡ್ಕ ಸರಳಿಮೂಲೆಯ ಧನ್ಯ ಬಾಲನ್ (19) ಮೃತದೇಹವು ಮನೆಯ ಸಮೀಪದ ಬಾವಿಯೊಳಗೆ ನೇಣು ಬಿಗಿದ ರೀತಿಯಲ್ಲಿ ಡಿ 13 ರ ಬುಧವಾರ ಕಂಡು ಬಂದಿದೆ. ಬಾವಿಯ ರಾಟೆಗೆ ಹಗ್ಗ ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಅಂಗಡಿಗೆಂದು ಮನೆಯಿಂದ ಹೊರಹೋದ ಆಕೆ ತುಂಬಾ ಹೊತ್ತಾದರೂ ಮನೆಗೆ ಹಿಂತಿರುಗದಾಗ ಮನೆಯವರು ಹುಡುಕಾಟ ಆರಂಭಿಸಿದ್ದಾರೆ. ಬಾವಿಯಲ್ಲಿ ನೇತುಹಾಕಿಕೊಂಡಿರುವ ಸ್ಥಿತಿಯನ್ನು ಗಮನಿಸಿ ಮನೆಯವರು ಕೂಡಲೇ ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಿದರೂ ಅಷ್ಟರಲ್ಲಾಗಲೇ ಮೃತರಾಗಿದ್ದರು. ಧನ್ಯಾ ಬಾಲನ್ ಮುಳ್ಳೇರಿಯದ ಖಾಸಗಿ ಕಂಪ್ಯೂಟರ್ ಸಂಸ್ಥೆಯಲ್ಲಿ ವಿಧ್ಯಾರ್ಥಿನಿಯಾಗಿದ್ದು ಕಲಿಕೆಯಲ್ಲಿ ಉತ್ತಮ ಸಾಧನೆ ಮಾಡಿದ್ದಳು. ಆದೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು , ಕೃತ್ಯಕ್ಕೆ ಕಾರಣ ತಿಳಿದುಬಂದಿಲ್ಲ.