ಮಂಗಳೂರು ಡಿ 14 : ನಗರದ ಕುಂಟಿಕಾನದಲ್ಲಿರುವ ಸಂತ.ಆನ್ಸ್ ಶಾಲೆಯ ಮಕ್ಕಳು , ಶಾಲೆಯ ಸಮೀಪದಲ್ಲಿಯೇ ಹೊಸತಾಗಿ ಆರಂಭವಾಗಿರುವ ಹೈ ಓನ್ 66 ಬಾರ್ ಆಂಡ್ ರೆಸ್ಟೊರೆಂಟ್ ಮುಚ್ಚುವಂತೆ ಕೋರಿ ಡಿ 14 ರ ಗುರುವಾರ ’ಪೋಸ್ಟ್ ಕಾರ್ಡ ಚಳವಳಿ’ ನಡೆಸಿದರು.
ಶಾಲೆಯಿಂದ ಸುಮಾರು 80 ಮೀಟರ್ ದೂರದಲ್ಲಿರುವ ಅನಧಿಕೃತ ಕಾನೂನು ಬಾಹಿರವಾಗಿ ವಿಧ್ಯಾರ್ಥಿಗಳ ಹಾಗೂ ಪೋಷಕರ ಪ್ರತಿಭಟನೆಯ ಮಧ್ಯೆಯೂ ತೆರೆಯಲಾಗಿರುವ ಬಾರ್ ಆಂಡ್ ರೆಸ್ಟೊರೆಂಟ್ದಾಗಿ ಹಲವಾರು ತೊಂದರೆಗಳು ಎದುರಾಗುವುದರಿಂದ ಅದನ್ನು ಮುಚ್ಚ ಬೇಕೆಂದು ವಿಧ್ಯಾರ್ಥಿಗಳು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾಧಿಕಾರಿ, ಮುಖ್ಯಮಂತ್ರಿ ಸೇರಿದಂತೆ ಹಲವಾರು ಜನರಿಗೆ ಪೋಸ್ಟ್ ಕಾರ್ಡ್ ಮೂಲಕ ವಿನಂತಿಸುತ್ತಿದ್ದಾರೆ. ಡಿ 7 ರಂದು ಉದ್ಘಾಟನೆಯಾಗಿದ್ದ ಬಾರ್ ಗೆ ಸಂತ.ಆನ್ಸ್ ಶಾಲಾ ಮಕ್ಕಳು ಹಾಗೂ ಆಡಳಿತ ಮಂಡಳಿ ಉದ್ಘಾಟನೆಯ ದಿನವೇ ವಿರೋಧ ವ್ಯಕ್ತಪಡಿಸಿದ್ದರು. ಬಾರ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಬಂದ ಮೇಯರ್ ಕವಿತಾ ಸನಿಲ್ ಮಕ್ಕಳ ಪ್ರತಿಭಟನೆ ಕಂಡು ಕಾರ್ಯಕ್ರಮದಲ್ಲಿ ಭಾಗವಹಿಸದೆ ತೆರಳಿದ್ದರು. ಈ ನಡುವೆ ಮೇಯರ್ ಅವರ ಅನುಪಸ್ಥಿತಿಯಲ್ಲಿಯೇ ಮದ್ಯದಂಗಡಿಗೆ ಚಾಲನೆ ನೀಡಿದ್ದರು.
.JPG)
.JPG)
.JPG)
.JPG)