ಮಂಗಳೂರು, ಜು 22 (Daijiworld News/MSP): ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಕಾಸರಗೋಡು, ಉಡುಪಿ ಮಳೆ ಮುಂದುವರಿದಿದ್ದು, ಅಣೆಕಟ್ಟು ತುಂಬಿದ್ದು, ನದಿಗಳೆಲ್ಲವೂ ಉಕ್ಕಿಹರಿಯುತ್ತಿದೆ.
ಈಗಾಗಲೇ ಭಾರೀ ಮಳೆಯಿಂದಾಗಿ ತತ್ತರಿಸಿರುವ ದಕ್ಷಿಣ ಕನ್ನಡ ಹಾಗೂ ಕೊಡಗು, ಕಾಸರಗೋಡು ಜಿಲ್ಲೆಗಳಲ್ಲಿ ರೆಡ್ ಆಲರ್ಟ್ ಘೋಷಣೆಯಾಗಿದ್ದು, ಭಾರೀ ಮಳೆಗೆ ಮೂರು ಜಿಲ್ಲೆಯ ಜನರು ನಲುಗಿದ್ದಾರೆ. ದಕ್ಷಿಣ ಕನ್ನಡದಲ್ಲಿ ಮಳೆ ಅಬ್ಬರ ಮುಂದುವರಿದ್ದು, ಜಿಲ್ಲೆಯ ನದಿಗಳಾದ ನೇತ್ರಾವತಿ , ಕುಮಾರಧಾರ ನದಿಗಳು ಉಕ್ಕಿ ಹರಿಯುತ್ತಿದೆ.
ಬಂಟ್ವಾಳದಲ್ಲಿ ನೇತ್ರಾವತಿ ನದಿ ನೀರಿನ ಮಟ್ಟ ಸೋಮವಾರ 5.7 ಮೀಟರ್ (ಅಪಾಯದ ಮಟ್ಟ 8.5 ಮೀಟರ್) ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿ ನೀರಿನ ಮಟ್ಟ 25.8 (ಅಪಾಯದ ಮಟ್ಟ 31.5 ಮೀಟರ್) ಹಾಗೂ ಉಪ್ಪಿನಂಗಡಿ ಕುಮಾರಧಾರ ನದಿ ನೀರಿನ ಮಟ್ಟ 15.0 ಮೀಟರ್ (ಅಪಾಯದ ಮಟ್ಟ 26.5 ಮೀಟರ್) ದಾಖಲಾಗಿದೆ.
ತುಂಬೆ ಅಣೆಕಟ್ಟಿನಲ್ಲಿ ಒಳಹರಿವು 1037 ಕ್ಯೂಬಿಕ್ ಇದ್ದು ಅಷ್ಟೇ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ. ನಿರಂತರ ಮಳೆಯಾಗುತ್ತಿರುವುದರಿಂದ ತುಂಬೆ ಅಣೆಕಟ್ಟಿನಲ್ಲಿ ನೀರಿನ ಮಟ್ಟವನ್ನು 5 ಮೀ. ಕಾಯ್ದುಕೊಳ್ಳಲಾಗುತ್ತಿದೆ.