ಮಂಗಳೂರು, ಜು 22 (DaijiworldNews/SM): ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಮುಖೇನ ರಚನೆಯಾದ ಬಂಟ್ವಾಳ ಫರಂಗಿಪೇಟೆಯ ಟೀಮ್ ವೀರಾಂಜನೇಯ ತಂಡದ ನೂತನ ಲಾಂಛನ ಬಿಡುಗಡೆ ಹಾಗೂ ಧ್ಯೇಯ ವಾಕ್ಯ ಅನಾವರಣ ಕಾರ್ಯಕ್ರಮ ಇಲ್ಲಿನ ಅರ್ಕುಳ ಬೀಡುವಿನಲ್ಲಿ ಜರುಗಿತು.
ಪ್ರಸ್ತುತ ವರ್ಷದಲ್ಲಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳ ಆಲೋಚನೆ ಆಶಯವನ್ನು ಮುಂದಿಟ್ಟುಕೊಂಡು ಅರ್ಕುಳ ಬೀಡು ಧರ್ಮ ಚಾವಡಿಯಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿ ಅರ್ಕುಳ ಬೀಡು ಧರ್ಮದರ್ಶಿ ವಜ್ರನಾಭ ಶೆಟ್ಟಿ ದಿವ್ಯ ಹಸ್ತದಲ್ಲಿ ಇದನ್ನು ಅನಾವರಣಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಉಜಿರೆ ಎಸ್ಡಿಎಂಸಿ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ಡಾ. ಜಯಕುಮಾರ್ ಶೆಟ್ಟಿ, ನಮ್ಮದು ಯುವಜನರ ದೇಶ. ಇವರು ದೇಶದ, ಸಮಾಜದ ಪ್ರಗತಿಯಲ್ಲಿ ಕೆಲಸ ಮಾಡಿದರೆ ಮಾತ್ರ ದೇಶ ಸರ್ವತೋಮುಖ ಅಭಿವೃದ್ಧಿ ಖಂಡಿತಾ ಆಗುತ್ತದೆ. ಈ ಹಿನ್ನೆಲೆಯಲ್ಲಿ ಟೀಮ್ ವೀರಾಂಜನೇಯ ತಂಡ ಹಲವು ವರ್ಷಗಳಿಂದ ಪರಿಸರದಲ್ಲಿ ಉತ್ತಮ ಕೆಲಸ ಮಾಡಿಕೊಂಡು ಬಂದಿದ್ದಾರೆ. ಇನ್ಮುಂದೆ ಒಂದು ಲಾಂಛನ, ಧ್ಯೇಯವಾಕ್ಯದೊಂದಿಗೆ ಅವರು ಕೆಲಸ ಮಾಡಲು ಮುಂದಡಿ ಇಟ್ಟಿರುವುದು ಹರ್ಷದ ಸಂಗತಿ. ಮುಂದಿನ ದಿನಗಳಲ್ಲಿ ಅವರಿಂದ ಇನ್ನಷ್ಟು ಸಮಾಜಮುಖಿ ಕೆಲಸ ಮಾಡಲಿ ಅನ್ನೋದು ನಮ್ಮೆಲ್ಲರ ಆಶಯ ಎಂದರು.
ಕಾರ್ಯಕ್ರಮದಲ್ಲಿ ಕಂಪ ಸದಾನಂದ ಆಳ್ವಾ, ಚಂದ್ರಶೇಖರ ಗಾಂಭೀರ, ಜನಾರ್ದನ ಅರ್ಕುಳ, ಜಯರಾಜ್ ಕರ್ಕೇರ, ಸಂತೋಷ್ ಕುಮಾರ್ ತುಪ್ಪೆಕಲ್ಲು, ಕೆ ಆರ್ ಶೆಟ್ಟಿ ಅಡ್ಯಾರ್ ಪದವು, ಸೇಸಪ್ಪ ಕರ್ಕೇರ ಧರ್ಮಗಿರಿ ಹಾಗೂ ಅನೇಕ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು. ದಿನಕರ ಕರ್ಕೇರ ಮಂಟಮೆ ಸರ್ವರನ್ನೂ ಸ್ವಾಗತಿಸಿದರು.