ಬೆಳ್ತಂಗಡಿ, ಜು 23 (Daijiworld News/MSP): ಚೆನೈಯಿಂದ ಪೋರ್ಟಬ್ಲೇರ್ಗೆ ಪ್ರಯಾಣಿಸುತ್ತಿದ್ದ ಭಾರತೀಯ ವಾಯುಸೇನೆಯ ಎಎನ್ -32 ಸರಕು ಸಾಗಣೆ ವಿಮಾನ ಕಣ್ಮರೆಯಾಗಿ ಇಂದಿಗೆ ಮೂರು ವರುಷ ಸಂದಿತು. ಇದೇ ವಿಮಾನದಲ್ಲಿದ್ದ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ನಿವಾಸಿ, ಯೋಧ ಏಕನಾಥ ಶೆಟ್ಟಿ ಅವರು ಕೂಡಾ ಕಣ್ಮರೆಯಾಗಿ ಮೂರು ವರುಷವಾಯಿತು.
ಜುಲೈ 22 ರಂದು ಬೆಳಗ್ಗೆ ಚೈನೈನಿಂದ ತೆರಳಿದ್ದ ಏರ್ಪೋರ್ಸ್ಅಂಡಮಾನ್ ಪೋರ್ಟ್ಬ್ಲೇರ್ಗೆ ತಲುಪದೆ ನಾಪತ್ತೆಯಾಗಿತ್ತು. ಪೋರ್ಟ್ಬ್ಲೇರ್ಗೆ ತೆರಳುತ್ತಿದ್ದ ವಿಮಾನದಲ್ಲಿ ಸರಕಿನ ಜತೆಗೆ ಆರು ಮಂದಿ ವಿಮಾನ ಸಿಬ್ಬಂದಿಗಳು, ಹನ್ನೊಂದು ಮಂದಿ ವಾಯು ಸೇನೆ ಸಿಬ್ಬಂದಿ, ಇಬ್ಬರು ಭೂಸೇನೆ ಯೋಧರು, ಒಬ್ಬ ಕರಾವಳಿ ರಕ್ಷಣಾ ಪಡೆಯ ನಾವಿಕ, ಒಬ್ಬ ನಾವಿಕ ಮತ್ತುಎಂಟು ಮಂದಿ ನೌಕಾ ಪಡೆ ಸಿಬ್ಬಂದಿಗಳು ಇದ್ದರುಎನ್ನಲಾಗಿದ್ದು, ಅದರಲ್ಲಿ ಗುರುವಾಯನಕೆರೆ ಯೋಧ ಏಕನಾಥ ಶೆಟ್ಟರುಕೂಡಾಒಬ್ಬರು.
ಮೂಲತ: ಮಂಗಳೂರು ನಿವಾಸಿ ನಿವೃತ್ತಯೋಧ ದಿ| ಕೃಷ್ಣ ಶೆಟ್ಟಿ ಹಾಗೂ ಸುನಂದ ದಂಪತಿಗಳ ಐದು ಮಂದಿ ಮಕ್ಕಳಲ್ಲಿ ಇವರು ಮೂರನೆಯವರು. ಮಂಗಳೂರಿನ ಲೇಡಿಹಿಲ್ ಕೆನರಾ ಹೈಸ್ಕೂಲಿನಲ್ಲಿ ಪ್ರೌಢಶಾಲೆ ಶಿಕ್ಷಣ ಮುಗಿಸಿ ಸೇನೆಗೆ ಸೇರ್ಪಡೆಯಾಗಿದ್ದರು. ಜಯಂತಿಯವರನ್ನು ವಿವಾಹವಾಗಿ, ಗುರುವಾಯನಕೆರೆಯಲ್ಲಿ ವಾಸ್ತವ್ಯ ಹೊಂದಿದ್ದರು. ಇಬ್ಬರು ಮಕ್ಕಳು. ಹಿರಿಯವಳು ಆಶಿತಾ ಮಗ ಅಕ್ಷಯ್.
ಕಣ್ಮರೆಯಾದ ವಿಮಾನದಲ್ಲಿ ಏಕನಾಥ ಶೆಟ್ಟರು ಇದ್ದರು ಎಂಬ ಮಾಹಿತಿ ಸಿಗುತ್ತಿದ್ದಂತೆ ಮನೆ ಮಂದಿಯಲ್ಲಿ ಆತಂಕದ ವಾತಾವರಣ ಮೂಡಿತ್ತು. ಕೇಂದ್ರ ಹಾಗೂ ರಾಜ್ಯ ಸರಕಾರ, ಸೇನೆಯ ಹಿರಿಯ ಅಧಿಕಾರಿಗಳ ಧೈರ್ಯದ ನುಡಿಗಳು ಮನೆಯವರ ಸ್ಥೈರ್ಯವನ್ನು ಹೆಚ್ಚಿಸಿತ್ತು. ಏಕನಾಥ ಶೆಟ್ಟರ ಪತ್ನಿ ಜಯಂತಿಯವರ ಮನದೊಳಗೆ ಎಷ್ಟೇ ದುಃಖ, ದುಮ್ಮಾನ, ಆತಂಕವಿದ್ದರೂ ಒಬ್ಬ ಯೋಧನ ಪತ್ನಿಯಾಗಿ ದುಃಖವನ್ನು ಸಹಿಸಿ, ವ್ಯವಹರಿಸಿದ ರೀತಿ ಎಲ್ಲರಿಗೂ ಮಾದರಿಯಾಗಿದೆ.
ಸೇನೆಯಿಂದ ಯೋಧನ ಸಮವಸ್ತ್ರದ ಪರಿಕರ ಹಸ್ತಾಂತರದ ವೇಳೆ ಜಯಂತಿಯವರು ಭಾವುಕರಾಗಿದ್ದರೂ, ಆತ್ಮಸ್ಥೈರ್ಯದಿಂದ ಸ್ವೀಕರಿಸಿದ್ದರು. ಆದರೂ ಈ ಘಟನೆ ನಡೆದು ಜುಲೈ 22ಕ್ಕೆ ಮೂರು ವರುಷ ಸಂದರೂ ಇಂದಿಗೂ ಏಕನಾಥ ಶೆಟ್ಟರ ಬರುವಿಕೆಗಾಗಿ ಅವರ ಮನೆಯವರು ಇನ್ನೂ ನಿರೀಕ್ಷೆಯಲ್ಲಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರಕಾರಯೋಧನ ಮನೆಯವರಿಗೆ ಭರವಸೆಯ ಬೆಳಕಾಗಬೇಕಾಗಿದೆ.
ಸೇನೆಗೆ ಸೇರ್ಪಡೆ: 1985 ರಲ್ಲಿ ಭಾರತೀಯ ಭೂಸೇನೆಗೆ ಸೇರ್ಪಡೆಯಾದ ಏಕನಾಥ ಶೆಟ್ಟಿ ಅವರು ಎಮ್ಆರ್ಸಿಗೆ ಸೇರಿ, ಸೇನೆಯಲ್ಲಿ ಸುಭೇದಾರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. 1986ರಲ್ಲಿ ಶ್ರೀಲಂಕಾದಲ್ಲಿ ಭಾರತೀಯ ಶಾಂತಿ ಪಾಲನಾ ಪಡೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಅಲ್ಲದೆ ಜಮ್ಮು ಕಾಶ್ಮೀರ, ಅರುಣಾಚಲ, ಪಂಜಾಬ್ ಮೊದಲಾಡೆ ಸೇವೆ ಸಲ್ಲಿಸಿದ್ದರು. 2009ರಲ್ಲಿ ಸೇವೆಯಿಂದ ನಿವೃತ್ತರಾಗಿದ್ದರು.
ನಿವೃತ್ತರಾದ ಮೂರೇ ತಿಂಗಳಲ್ಲಿ ಅವರು ವಾಯುಸೇನೆಯ ಡಿಫೆನ್ಸ್ ಸೆಕ್ಯೂರಿಟಿ ಫೋರ್ಸ್ಗೆ ಸೇರಿಕೊಂಡು ಕಣ್ಣೂರಿನಲ್ಲಿ ತರಬೇತಿ ಮುಗಿಸಿ ಕಾನ್ಪುರ, ಗೋವಾದಲ್ಲಿ ಸೇವೆ ಸಲ್ಲಿಸಿದ್ದರು. ಬಳಿಕ ಪೋರ್ಟ ಬ್ಲೇರ್ನಲ್ಲಿಕಾರ್ಯನಿರ್ವಹಿಸುತ್ತಿದ್ದರು.