ಮೂಡುಬಿದಿರೆ, ಜು 23 (Daijiworld News/MSP): ತಾನು ಸಿಸಿಬಿ ಪೊಲೀಸ್ ಎಂದು ಬೆದರಿಸಿ ಕ್ವಾರಿ ಮಾಲೀಕನಿಂದ ಹಫ್ತಾ ವಸೂಲಿ ಮಾಡುತ್ತಿದ್ದ ನಾಗೇಶ್ ಮಳಲಿ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಆರೋಪಿಗೆ ಎಂಟು ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಈತ ಪೊಲೀಸರ ಸೋಗಿನಲ್ಲಿ ಬಂದು ಇತ್ತೀಚೆಗೆ ಕಲ್ಲುಮುಂಡ್ಕೂರು, ಬಜ್ಪೆ, ಮೂಡುಬಿದಿರೆಯ ಕಲ್ಲು ಕ್ವಾರಿಗೆ ಭೇಟಿ ನೀಡಿ ಹಫ್ತಾ ವಸೂಲಿ ಮಾಡಿದ್ದ.
ಕೆಲದಿನಗಳ ಹಿಂದೆಷ್ಟೇ ಇಲ್ಲಿನ ಕಲ್ಲು ಕ್ವಾರಿಗಳಿಗೆ ಪೊಲೀಸರು ದಾಳಿ ನಡೆಸಿ ಕಾನೂನು ಕ್ರಮ ಕೈಗೊಂಡ ಬಳಿಕ ಪೊಲೀಸ್ ಹೆಸರಿನಲ್ಲಿ ಹಫ್ತಾ ವಸೂಲಿಗೆ ಬಂದಾಗ ಅನುಮಾನಗೊಂಡ ಕ್ವಾರಿ ಮಾಲೀಕರು ಹಾಗೂ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನಲೆಯಲ್ಲಿ ಆತನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.