ಉಡುಪಿ, ಜು 23 (Daijiworld News/MSP): ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಉಡುಪಿಯ ಹಲವೆಡೆಗಳಲ್ಲಿ ಅವಾಂತರ ಸೃಷ್ಟಿಸಿದೆ. ಉಡುಪಿಯ ಕೃಷ್ಣಮಠದ ಹತ್ತಿರದ ಪರಿಸರದಲ್ಲಿ ಮಳೆ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲದೆ ಹಲವರ ಮನೆಯೊಳಗೆ ಮಳೆ ನೀರು ನುಗ್ಗಿದ್ದು. ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.
ತೀವ್ರವಾಗಿ ಸುರಿಯುವ ಮಳೆಯ ಕಾರಣದಿಂದ ಉಡುಪಿಯ ಶಾಲೆಗಳಿಗೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ರಜೆ ಘೋಷಣೆ ಮಾಡಿದ್ದರು. ಆದರೆ ಪದವಿ ಕಾಲೇಜುಗಳಿಗೆ ರಜೆ ಇಲ್ಲದ ಕಾರಣ ಹಲವಾರು ವಿದ್ಯಾರ್ಥಿಗಳು ಕಾಲೇಜಿಗೆ ಆಗಮಿಸಿದ್ದು ಕಾಲೇಜು ಅಡಳಿತ ಮಂಡಳಿಗಳು ತದನಂತರ ರಜೆ ಘೋಷಣೆ ಮಾಡಿವೆ.
ಉಡುಪಿಯ ಕೃಷ್ಣ ಮಠ, ಗುಂಡಿಬೈಲು, ಬನ್ನಂಜೆ ಮುಂತಾದೆಡೆ ಮಳೆಯ ಆರ್ಭಟಕ್ಕೆ ಕೃತಕ ನೆರೆ ಸೃಷ್ಟಿಯಾಗಿದೆ. ಉಡುಪಿಯಲ್ಲಿ ಬೆಳಗ್ಗೆ 8.30 ರವರೆಗೆ 135 ಮಿ.ಮೀಟರ್ ಮಳೆಯಾಗಿದೆ.