ಬೆಳ್ತಂಗಡಿ, ಜು 24 (Daijiworld News/MSP): ಚಾರ್ಮಾಡಿ ಘಾಟ್ ತಿರುವಿಂದ ಕಾರೊಂದು ಕೆಳಕ್ಕುರುಳಿದ್ದು ಸವಾರರಿಬ್ಬರು ಕಾರಿಂದ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಭಾನುವಾರ ಸಂಜೆ ಕಾರ್ಕಳದ ಸೂಡ ನಿವಾಸಿಗಳಾದ ಮೋಹನ್, ಶರಣ್ ಚಿಕ್ಕಮಗಳೂರಿಂದ ಹಿಂತಿರುಗುವಾಗ ನಿಯಂತ್ರಣ ತಪ್ಪಿದೆ. ತಕ್ಷಣ ಇಬ್ಬರು ಕಾರಿಂದ ಜಿಗಿದ ಪರಿಣಾಮ ಅಪಾಯದಿಂದ ಪಾರಾಗಿದ್ದಾರೆ. ಆದರೆ ಕಾರು 100 ಅಡಿ ಆಳಕ್ಕೆ ಬಿದ್ದದ್ದು, ಸೋಮವಾರ ಸಂಜೆ ಕ್ರೇನ್ ಸಹಾಯದಿಂದ ಮೇಲೆತ್ತಲಾಗಿದೆ.
ಘಟನೆಯಿಂದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.