ಉಡುಪಿ, ಡಿ 15: ಭೀಕರ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗಗಳನ್ನು ವಿಶಾಲ ಹೃದಯದಿಂದ ದಾನ ಮಾಡಿರುವ ಘಟನೆ ನಡೆದಿದೆ.
ಎರಡುದಿನಗಳಹಿಂದೆಜಿಲ್ಲೆಯಕೋಟದಲ್ಲಿಕಾರಿನಲ್ಲಿ ಹೋಗುವಾಗ ಲಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ನಡೆದರಸ್ತೆಅಪಘಾತದಲ್ಲಿ ಮಗ ಅವಿನಾಶ್ ಮತ್ತು ಅತ್ತೆ ಗಿರಿಜಾ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಕಸ್ತೂರಿ ಮತ್ತು ಅವರ ಪತಿಗೆ ತಲೆಗೆ ತೀವ್ರವಾದ ಪೆಟ್ಟು ಬಿದ್ದಿದ್ದು, ದಂಪತಿಯನ್ನು ಮಣಿಪಾಲದ ಕಸ್ತೂರಬಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿತ್ತು. ಕಸ್ತೂರಿ ಅವರ ಮಿದುಳು ನಿಷ್ಕ್ರಿಯಗೊಂಡಿರುವುದನ್ನು ವೈದ್ಯರು ಬುಧವಾರ ಖಚಿತಪಡಿಸಿದ್ದರು.
ಮೆದುಳುನಿಷ್ಕ್ರಿಯಗೊಂಡಪರಿಣಾಮಅವರಬಹುಅಂಗಾಂಗಗಳನ್ನುದಾನಮಾಡಲಾಗಿದೆ. ಅಂಗಾಂಗಗಳನ್ನು ದಾನ ಮಾಡಲು ಸಹೋದರರಾದ ಶೈಲೇಶ್, ಪ್ರತಾಪ್ ಒಪ್ಪಿಗೆ ಸೂಚಿಸಿದ್ದು, ಕಸ್ತೂರಿಯವರಿಂದ ಎರಡುಕಿಡ್ನಿ, ಕಣ್ಣುಗಳು, ಯಕೃತ್, ಹೃದಯಕವಾಟವನ್ನುದಾನಪಡೆದಿದ್ದಾರೆ.