ಮಂಗಳೂರು ಡಿ17: ಪ್ರಧಾನ ಮಂತ್ರಿ ನರೇಂದ್ರ ಮೋದಿ ನಾಳೆ ಮಂಗಳೂರಿಗೆ ಆಗಮಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ಮಂಗಳೂರಿನಲ್ಲಿ ಪ್ರಧಾನಿಯವರಿಗೆ ಕಾರ್ಯಕ್ರಮಗಳು ನಿಗದಿಯಾಗಿಲ್ಲವಾದರೂ ಡಿಸೆಂಬರ್ 19 ರಂದು ಲಕ್ಷದ್ವೀಪದಲ್ಲಿ ಅವರು ಓಖಿ ಚಂಡಮಾರುತ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಮಂಗಳೂರು ಮೂಲಕ ಲಕ್ಷದ್ವೀಪಗಳಿಗೆ ತೆರಳುವ ಯೋಜನೆ ಹಾಕಿಕೊಂಡಿರುವ ಪ್ರಧಾನಿಯವರು ನಾಳೆ ಮಂಗಳೂರು ವಿಮಾನ ನಿಲ್ದಾನಕ್ಕೆ ಆಗಮಿಸಿ ಕದ್ರಿ ಸಮೀಪದ ಸರ್ಕಿಟ್ ಹೌಸ್ ನಲ್ಲಿ ತಂಗಲಿದ್ದಾರೆ ಹಾಗೂ ಮರುದಿನ ಹೆಲಿಕಾಪ್ಟರ್ ಮೂಲಕ ಲಕ್ಷದ್ವೀಪಿಗೆ ಪ್ರಯಾಣಿಸಲಿದ್ದಾರೆ ಎಂದು ತಿಳಿದುಬಂದಿದೆ.
ಪ್ರಧಾನಿಯ ಮಂಗಳೂರು ವಾಸ್ತವ್ಯದ ಬಗ್ಗೆ ಪ್ರಧಾನಿ ಕಛೇರಿಯಿಂದ ಬಿಜೆಪಿ ಜಿಲ್ಲಾ ಘಟಕಕ್ಕೆ ಅಧಿಕ್ರತ ಸೂಚನೆ ದೊರಕಿಲ್ಲವಾದರೂ ಯಾವುದೇ ಕ್ಷಣದಲ್ಲೂ ಪ್ರಕಟನೆ ದೊರಕಲು ಸಾಧ್ಯವಿದೆ ಎಂದು ನಾಯಕರ ಅಂಬೋಣ.