ಕಾಸರಗೋಡು ಡಿ 16 : ಕ್ರಿಕೆಟ್ ಪಂದ್ಯಾಟದ ಮದ್ಯೆ ಯುವಕ ಕುಸಿದುಬಿದ್ದು ಸಾವಿಗೀಡಾದ ಘಟನೆ ಡಿ.15 ಶನಿವಾರ ಮೀಯಪದವಿನಲ್ಲಿ ಸಂಭವಿಸಿದೆ. ಕಾಸರಗೋಡು ಜಿಲ್ಲೆಯ ಉಪ್ಪಳ ಜೋಡುಕಲ್ಲಿನ ನಾರಾಯಣ ಮಡಿವಾಳ - ಚಂದ್ರಾವತಿ ದಂಪತಿಯ ಮಗನಾದ ಪದ್ಮನಾಭ (25) ಮೃತಪಟ್ಟವರು. ಕ್ರಿಕೆಟ್ ಪಟುವಾಗಿದ್ದ ಅವರು ಪಂದ್ಯಾಟವೊಂದರಲ್ಲಿ ಬೌಲಿಂಗ್ ಮಾಡುವ ವೇಳೆ ಮೈದಾನಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಇವರು ಪಚ್ಚಂಬಳದಲ್ಲಿ ಮೊಬೈಲ್ ದುರಸ್ತಿ ಅಂಗಡಿ ನಡೆಸುತ್ತಿದ್ದರು. ಇವರು ಜೋಡುಕಲ್ಲು, ಕುಬಣೂರು ಉಪ್ಪಳ ಮೊದಲಾದ ಕ್ರಿಕೆಟ್ ತಂಡಗಳನ್ನು ಇವರು ಪ್ರತಿನಿಧಿಸುತ್ತಿದ್ದರು. ಉತ್ತಮ ಆಲ್ ರೌಂಡರ್ ಆಗಿದ್ದ ಪದ್ಮನಾಭ ಅವಿವಾಹಿತರಾಗಿದ್ದು ಇಬ್ಬರು ಸಹೋದರನನ್ನು ಆಗಲಿದ್ದಾರೆ. ಆಟದ ನಡುವೆ ಜೀವನದ ಆಟವನ್ನು ಕೊನೆಗೊಳಿಸಿದ ಪದ್ಮನಾಭ ಅವರ ಅಂತಿಮ ದರ್ಶನಕ್ಕಾಗಿ ಜನಸಾಗರವೇ ನೆರೆದಿತ್ತು.