ಮೂಡಬಿದಿರೆ ಡಿ 16: ತನ್ನ ಮದುವೆಯ ಹಿಂದಿನ ದಿನ ಅಂದರೆ ಡಿಸೆಂಬರ್ 9 ರಂದು ನಾಪತ್ತೆಯಾಗಿದ್ದ ಪ್ರಿಯಾಂಕಾ ಪ್ರಕರಣ ದಿನಕ್ಕೊಂದು ತಿರುವು ಪಡಿತಾ ಇದೆ. ಇದೀಗ ಆಕೆಯ ಹೆಸರಿನಲ್ಲಿ ಮನೆಗೊಂದು ಪತ್ರ ತಲುಪಿದೆ. ತನ್ನ ಅಮ್ಮನನ್ನು ಉದ್ದೇಶಿಸಿ ಪ್ರಿಯಾಂಕಾ ಪತ್ರ ಬರೆದಂತಿದ್ದರೂ ಈ ಪತ್ರ ತನ್ನ ಮಗಳದ್ದಲ್ಲ ಎಂದು ತಾಯಿ ಸ್ಪಷ್ಟಪಡಿಸಿದ್ದಾರೆ. ನಾನು ಇನ್ನೋಳಿಯ ಹೈದರ್ನೊಂದಿಗೆ ಸ್ವ ಇಚ್ಛೆಯಿಂದ ತೆರಳಿದ್ದೇನೆ. ಪ್ರಿಯಕರನೊಂದಿಗೆ ಸುಖವಾಗಿದ್ದೇನೆ. ಕ್ಷಮಿಸಿ, ಹುಡುಕುವ ಪ್ರಯತ್ನ ಮಾಡಬೇಡಿ. ಕೆಲವೇ ದಿನಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗುತ್ತೇವೆ. ಈ ಬಗ್ಗೆ ಜಿಲ್ಲಾ ಹಾಗೂ ಮೂಡುಬಿದಿರೆ ಪೊಲೀಸ್ ಅಧಿಕಾರಿಗಳಿಗೂ ಪತ್ರ ಬರೆಯುತ್ತೇವೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ತಮಗೆ ಬಂದಿರುವ ಪತ್ರದ ಬಗ್ಗೆ ಮನೆಯವರು ಮೂಡುಬಿದಿರೆ ಠಾಣೆಗೆ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ. ಈ ಪತ್ರವನ್ನು ಪ್ರಿಯಾಂಕಾ ಬರೆದಳೇ? ಬೇರೆ ಯಾರಾದರೂ ಬರೆದರೆ? ಅಥವಾ ಪ್ರಕರಣಕ್ಕೊಂದು ತಿರುವು ನೀಡಲು ಹೀಗೊಂದು ಬೆಳವಣಿಗೆ ನಡೆದಿರಬಹುದೇ? ಎಂಬಿತ್ಯಾದಿ ಪ್ರಶ್ನೆಗಳಿಗೆ ಪತ್ರದ ಸತ್ಯಾಸತ್ಯೆಯ ಬಗ್ಗೆ ಪೋಲೀಸರ ಪರಿಶೀಲನೆಯಿಂದ ತಿಳಿದು ಬರಬೇಕಾಗಿದೆ.