ಪಡುಬಿದ್ರೆ, ಜು 28 (Daijiworld News/MSP): ಶಾಲಾ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದಲ್ಲಿ ಇನ್ನಾ ಗ್ರಾಮದ ಫೆಲಿಕ್ಸ್ ಡಿ’ ಸೋಜಾ(55) ಎಂಬಾತನನ್ನು ಪಡುಬಿದ್ರಿ ಎಸ್ಐ ಸುಬ್ಬಣ್ಣ ಅವರು ಜು. 26ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆತನಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಬಾಲಕಿಯು ಒಂದು ವರ್ಷದ ಹಿಂದೆ ಆರೋಪಿಯ ವಾಹನದಲ್ಲಿ ಶಾಲೆಗೆ ತೆರಳುತ್ತಿದ್ದಳು. ಆದರೆ ಅದನ್ನು ಬದಲಾಯಿಸಿ ಬಳಿಕ ಬೇರೊಂದು ರಿಕ್ಷಾ ಮೂಲಕ ಶಾಲೆಗೆ ಹೋಗುತ್ತಿದ್ದಾಗಲೂ ಆರೋಪಿಯು ಬಾಲಕಿಯ ಸಿಕ್ಕಿದಾಗಲೆಲ್ಲಾ ಕೈ ಸನ್ನೆಗಳ ಮೂಲಕ ಬಾಲಕಿಗೆ ಮಾನಸಿಕ ಹಿಂಸೆಯನ್ನು ನೀಡುತ್ತಿದ್ದ ಎಂದು ತಿಳಿದುಬಂದಿದೆ.
ಈ ವಿಚಾರ ಸಮಾಜ ಕಲ್ಯಾಣ ಇಲಾಖಾಧಿಕಾರಿ ಪ್ರಭಾಕರ ಆಚಾರ್ಯ ಅವರು ಬಾಲಕಿಯನ್ನು ಆಪ್ತ ಸಮಾಲೋಚನೆಗೆ ಒಳಪಡಿಸಿದಾಗ ವರ್ಷದ ಹಿಂದೆಯೂ ಆತ ಕಿರುಕುಳ ನೀಡಿದ್ದ ವಿಷಯ ಬಹಿರಂಗವಾಗಿದೆ. ಈ ಅಧಿಕಾರಿಯ ಸೂಚನೆಯಂತೆ ಆರೋಪಿಯನ್ನು ಪೋಕ್ಸೋ ಕಾಯಿದೆ ಅಡಿಯಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು .