ಇಸ್ಮಾಯಿಲ್ ಮೂಡುಶೆಡ್ಡೆ ಅವರ ನಿರ್ದೇಶನದ " ಪಮ್ಮಣ್ಣೆ ದಿ ಗ್ರೇಟ್ " ಚಿತ್ರದ ಹೆಸರೇ ಸಿನಿ ಪ್ರೀಯರನ್ನು ಆಕರ್ಷಿಸುವಂತಿದೆ. ಹೆಸರಿಗಿಂತ ಚಿತ್ರದ ಪೋಸ್ಟರ್ ನೋಡುಗರ ಕೂತೂಹಲ ಬಡಿದೆಬ್ಬಸುವಂತಿದೆ. ಪದವಿನಂಗಡಿಯ ಕೊರಗಜ್ಜನ ದೈವಸ್ಥಾನದಲ್ಲಿ ಮಹೂರ್ತ ಕಂಡ ಸಿನಿಮಾ ಈಗಾಗಲೇ ಮೊದಲ ಹಂತದ ಶೂಟಿಂಗ್ ಮುಗಿಸಿದ ಖುಷಿಯಲ್ಲಿದೆ. ಮೊಗವೀರ ಸಮಾಜದ ಕಥೆಯನ್ನು ಒಳಗೊಂಡ ಚಿತ್ರದಲ್ಲಿ ಪಮ್ಮಣ್ಣೆಯಾಗಿ ಅರವಿಂದ ಬೋಳಾರ್ ಕಾಣಿಸಿಕೊಳ್ಳಲ್ಲಿದ್ದಾರೆ. ಪೆದ್ದು ಪೆದ್ದಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿರುವ ಇವರು ಮೂವರು ತಂಗಿಯ ಮುದ್ದಿನ ಅಣ್ಣನಾಗಿ ಅಭಿನಯಿಸಿದ್ದಾರೆ ಅನ್ನೋದು ವಿಶೇಷ. ಪಡುಬಿದ್ರಿಯ ಎರ್ಮಾಣ್ ಸಮೀಪದ ಉಚ್ಚಿಲದಲ್ಲಿ ಮನೆಯೊಂದನ್ನು " ಪಮ್ಮಣ್ಣನ ಮನೆ" ಯಾಗಿ ಸಿನಿಮಾ ತಂಡ ಆಯ್ಕೆ ಮಾಡಿಕೊಂಡಿದ್ದಾರೆ. ಸಸಿಹಿತ್ಲವಿನ ಬೀಚ್ , ಕಾಪು ಬೀಚು ಮುಂತಾದ ಕಡೆ ಚಿತ್ರಿಕರಣಗೊಂಡ ಸಿನಿಮಾವು ಡಿ 18 ರಿಂದ ಮತ್ತೆ ಎರಡನೇ ಹಂತದ ಶೂಟಿಂಗ್ ಪ್ರಾರಂಭಿಸಲಿದೆ. ಚಿತ್ರದಲ್ಲಿ ಒಟ್ಟು ಮೂರು ಹಾಡುಗಳಿದೆ . ಇದರಲ್ಲಿ ಮೈತ್ರಿ ಪಿಲ್ಮ್ಸ್ ನಿರ್ಮಾಣದಲ್ಲಿ , ಆರೂರು ಪಟ್ಟಾಭಿ ನಿರ್ದೇಶನದಲ್ಲಿ 1972ರಲ್ಲಿ ತೆರೆಕಂಡ ಚಿತ್ರ ಪಗೆತ್ತ ಪುಗೆ ಚಿತ್ರದ ನಾಲ್ಕು ಹಾಡುಗಳಿಲ್ಲಿ ಒಂದಾದ ಸುಪಾರ್ ಹಿಟ್ ಮೋಕೆದ ಸಿಂಗಾರಿ ಹಾಡು ಮತ್ತೆ ಪಮ್ಮಣ್ಣೇ ದಿ ಗ್ರೇಟ್ ನಲ್ಲಿ ಹೊಸ ರೂಪದಲ್ಲಿ ಕಾಣಿಸಿಕೊಳ್ಳಲಿದೆ. ಅಂದು ಈ ಹಾಡಿಗೆ ರಾಜನ್ ನಾಗೇಂದ್ರ ಸಂಗೀತ ಸಂಯೋಜಕರಾಗಿ ದುಡಿದಿದ್ದರು. ಪಮ್ಮಣ್ಣೆ ದಿ ಗ್ರೇಟ್ ಸಿನಿಮಾದಲ್ಲಿ ಮೋಕೆದ ಸಿಂಗಾರಿ ಹಾಡು ರಾಜೇಶ್ ಕೃಷ್ಣನ್ ಅವರ ಕಂಠಸಿರಿಯಲ್ಲಿ ಮತ್ತೊಮ್ಮೆ ತುಳುನಾಡಿನಲ್ಲಿ ಮಿಂಚು ಹರಿಸಲಿದೆ.
ಈ ಹಾಡುನ್ನು ತುಳುನಾಡಿಗೆ ಕಾಣಿಕೆಯಾಗಿ ನೀಡಿದ ಸಿತಾರಾಂ ಕುಲಾಯಿ ಅವರನ್ನು ಸಂಪರ್ಕಿಸಿ ಹಾಡನ್ನು ಬಳಸಿಕೊಳ್ಳಲು ಅನುಮತಿ ಕೇಳಿದಾಗ , ಚಿತ್ರದ ಕಥೆ ಕೇಳಿ ಸಂತೋಷದ ಅನುಮತಿ ನೀಡಿದರು ಎನ್ನುತ್ತಾರೆ ಚಿತ್ರದ ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ. ಉಳಿದಂತೆ ಚಿತ್ರದಲ್ಲಿ ಮೀನ್ ಬೋಡಾ ಮೀನ್ ಎನ್ನುವ ಟಪ್ಪಾಂಗುಚ್ಚಿ ಹಾಡು , ಪಮ್ಮಣ್ಣೆ ಪಮ್ಮಣ್ಣೆ ಎನ್ನುವ ಆದ್ದೂರಿ ವೆಚ್ಚದ ಅಣ್ಣ ತಂಗಿಯ ಬಾಂಧವ್ಯ ಸಾಂಗ್ ಅನುರಾಧ ಭಟ್ ಅವರ ಕಂಠ ಸುಧೆಯಲ್ಲ್ಲಿ ಮೂಡಿ ಬರಲಿದೆ. ನೇತ್ರಾವತಿ, ನಂದಿನಿ, ಶಾಂಭವಿ ಎನ್ನೋ ಹೆಸರಿನ ಮೂರು ತಂಗಿಯರ ಅಣ್ಣನಾಗಿ ಅರವಿಂದ ಬೋಳಾರ್ ಕಾಣಿಸಿಕೊಂಡರೆ ಚಿತ್ರದ ನಾಯಕರಾಗಿ ಪ್ರಥ್ವಿ ಅಂಬರ್., ನಾಯಕಿಯಾಗಿ ಶಿಲ್ಪಾ ಸುವರ್ಣ ಜತೆಯಾಗಲಿದ್ದಾರೆ , ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ರಮೇಶ್ ಪಂಡಿತ್ ಅಭಿನಯಿದ್ದಾರೆ. ಚಿತ್ರಂಡವು 10 ದಿನಗಳನ್ನು ಹಾಡಿನ ಚಿತ್ರೀಕರಣಕ್ಕಾಗಿಯೇ ಮೀಸಲಿಟ್ಟಿದೆ ಚಿತ್ರದಲ್ಲಿ 2 ಪೈಟಿಂಗ್ ಇದೆ ಅನ್ನೊದು ಸದ್ಯದ ಮಾಹಿತಿ.. ಒಟ್ಟಾರೆಯಾಗಿ ಎಲ್ಲವನ್ನು ಗಮನಿಸಿದಾಗ ಪಮ್ಮಣ್ಣೆ ದಿ ಗ್ರೇಟ್ ಸಿನಿಮಾ ಗ್ರೇಟ್ ಅಗಿ ಹೊರಬರಲಿ ಅನ್ನೋದರಲ್ಲಿ ಎರಡು ಮಾತಿಲ್ಲ.