ಪುತ್ತೂರು, ಜು 28 (Daijiworld News/RD): ನಗರದಲ್ಲಿ ಗಾಂಜಾ ಮಾರಾಟ ಜಾಲ ಹೆಚ್ಚಾಗಿದ್ದು, ಪುತ್ತೂರು ಪೊಲೀಸರು ಇದೀಗ ಎರಡನೇ ಗಾಂಜಾ ಮಾರಾಟ ಪ್ರಕರಣವನ್ನು ಪತ್ತೆ ಹಚ್ಚಿ, ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿ 25 ವರ್ಷದ ಮಹಮ್ಮದ್ ಯೂಸುಫ್ ಆಗಿದ್ದು, ಈತ ಚಿಕ್ಕಮುಡ್ನೂರು ಗ್ರಾಮದ ವಿಷ್ಣುಮೂರ್ತಿ ದೇವಸ್ಥಾನದ ಬಳಿಯ ನಿವಾಸಿ. ಆರೋಪಿಯು ಉಪ್ಪಿನಂಗಡಿ ಪುತ್ತೂರು ರಸ್ತೆಯ ಸಾಲ್ಮರ ಕೊಟೇಚಾ ಸಭಾಂಗಣದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ನೋಂದಣಿಯಾಗದ ಸ್ಕೂಟರ್ ಒಂದರಲ್ಲಿ ಗಾಂಜಾ ಮಾರಾಟಕ್ಕಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
6 ಸಾವಿರ ಮೌಲ್ಯದ 160 ಗ್ರಾಮ ಗಾಂಜಾ ಮತ್ತು 50 ಸಾವಿರ ಮೌಲ್ಯದ ಸ್ಕೂಟರ್ ಅನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಬಗ್ಗೆ ಪುತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.