ಮಂಗಳೂರು, ಡಿ 17: ರಸ್ತೆ ಅಪಘಾತಗಳು ಹೆಚ್ಚಾಗುತ್ತಿರುವ ನಗರದ ನಂತೂರು ವೃತ್ತದ ಅಭಿವೃದ್ದಿಗಾಗಿ ಮುಖ್ಯಮಂತ್ರಿಗಳು 60 ಲಕ್ಷ ರೂಪಾಯಿಯನ್ನು ಮಂಜೂರು ಮಾಡಿದ್ದಾರೆ ಎಂದು ಸಂಸದ ಜೆ.ಆರ್ ಲೋಬೋ ಹೇಳಿದ್ದಾರೆ. ಈ ಬಗ್ಗೆ ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಇದಕ್ಕಾಗಿ ಟೆಂಡರ್ ನ್ನು ಡಿಸೆಂಬರ್ 24 ರಂದು ಕರೆಯಲಾಗುವುದು. ಅಲ್ಲದೆ 2018 ರ ಜನವರಿಯಲ್ಲಿ ಶೀಘ್ರದಲ್ಲಿ ಅಭಿವೃದ್ದಿ ಕೆಲಸಕ್ಕಾಗಿ ಚಾಲನೆ ನೀಡಲಾಗುವುದು ಎಂದರು. ಇಲ್ಲಿ ಸಂಚಾರ ದಟ್ಟನೆ ಇರೋ ಕಾರಣ ವೃತ್ತದ ಕೆಲಸವನ್ನು ಯಾವುದೇ ವಿಳಂಬವಿಲ್ಲದೆ ಪ್ರಾರಂಭಿಸಲು ಸಂಬಂಧಪಟ್ಟರಿಗೆ ನಾನು ಸೂಚನೆ ನೀಡುತ್ತೇನೆ ಎಂದು ಅವರು ಭರವಸೆ ನೀಡಿದರು. ವೃತ್ತದಲ್ಲಿರುವ ಪ್ರಸ್ತುತ ಬಸ್ ನಿಲ್ದಾಣವನ್ನು ತೆರವುಗೊಳಿಸಲಾಗುವುದು ಮತ್ತು ಪ್ರಯಾಣಿಕರಿಗಾಗಿ ಹಾಗೂ ಬಸ್ಸ್ ನಿಲ್ಲಲ್ಲು ಸೂಕ್ತವಾದ ವ್ಯವಸ್ಥೆಯನ್ನು ಕೈಗೊಳ್ಳಲಾಗುವುದು ಎಂದರು.