ಬೆಳ್ತಂಗಡಿ, ಡಿ 17 : ಚಾರ್ಮಾಡಿ ಘಾಟಿಯ ಬಾರಿಮಲೆ ಸೋಮನಕಾಡು ಕಣಿವೆಯಲ್ಲಿ ಡಿ 16 ರ ರಾತ್ರಿ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಸಾಮಾನ್ಯವಾಗಿ ಏಪ್ರಿಲ್, ಮೇ ತಿಂಗಳಿನಲ್ಲಿ ಕಾಣಿಸಿಕೊಳ್ಳುವ ಕಾಡ್ಗಿಚ್ಚು ಡಿಸೆಂಬರ್ ತಿಂಗಳಿನಲ್ಲಿಯೇ ಕಾಣಿಸಿಕೊಂಡಿದ್ದು ಆತಂಕಕ್ಕೆ ಕಾರಣವಾಗಿದೆ. ಸಹ್ಯಾದ್ರಿ ಸಂಚಯದ ತಂಡದವರು ನಿನ್ನೆ ಆ ಪ್ರದೇಶಕ್ಕೆ ಭೇಟಿ ನೀಡುವ ಸಂದರ್ಭ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಈ ಕುರಿತು ಕೊಟ್ಟಿಗೆಹಾರ ಅರಣ್ಯಾಧಿಕಾರಿಗೆ ದೂರು ಕೂಡಾ ನೀಡಲಾಗಿದೆ. ಅತ್ಯಧಿಕ ಮಳೆಕಾಡು ಇರುವ ಪ್ರದೇಶ ಬಾಂಜಾರುಮಲೆಯಲ್ಲಿ ಎಸ್ಟೇಟ್ ಮಾಫಿಯಾಗಳು ಕಾಡಿನೊಳಗೆ ಬಲು ಜೋರಾಗಿ ನಡಿತಾ ಇದೆ. ಕಾಡನ್ನು ಕಡಿದು ಎಸ್ಟೇಟ್ ನಿರ್ಮಾಣ ಎಗ್ಗಿಲ್ಲದೆ ಸಾಗಿದೆ. ರಬ್ಬರ್ ತೋಟಗಳನ್ನು ಬೆಳೆಸಲಾಗಿದೆ. ಹೀಗಾಗಿ ಹಚ್ಚ ಹಸುರಾಗಿ ಇರಬೇಕಿದ್ದ ಹುಲ್ಲುಗಾವಲು ಒಣಗಿ ಹೋಗಿದೆ. ಇದರ ನೇರಪರಿಣಾಮ ನೇತ್ರಾವತಿ ನದಿ ಮೂಲದ ಮೇಲಾಗುತ್ತಿದೆ ಇದೆ. ನೇತ್ರಾವತಿ ನದಿಯ ಉಪನದಿಗಳಾದ ಅಣಯೂರು ಹೊಳೆ, ಸುನಾಲ ಹೊಳೆ, ನೆರಿಯಾ ಹೊಳೆಗಳು ನೇತ್ರಾವತಿಯ ಮೂಲ ಪ್ರದೇಶಗಳು. ಆದರೆ ಅನಿಯಮಿತ ಕಾಡ್ಚಿಚ್ಚಿನಿಂದಾಗಿ ನೇತ್ರಾವತಿ ನದಿಗಳ ಮೂಲ ಪ್ರದೇಶಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ.