ಬೆಂಗಳೂರು : ತಮಿಳುನಾಡಿನ ಶಶಿಕಲಾ ನಟರಾಜನ್ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗಿತ್ತು ಎಂಬ ಡಿಐಜಿ ರೂಪಾ ಆರೋಪ ರಾಜ್ಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು. ಆದರೆ ಇದೀಗ ಆರ್ಟಿಐ ಅಡಿ ಸಲ್ಲಿಸಲಾಗಿದ್ದ ಅರ್ಜಿಯಲ್ಲಿ ರೂಪಾ ಅವರು ಮಾಡಿದ ಆರೋಪಗಳಿಗೆ ಪುಷ್ಟಿ ನೀಡುವ ಯಾವುದೇ ಅಂಶ ಇಲ್ಲ. ಆರ್ಟಿಐ ಕಾರ್ಯಕರ್ತ ನರಸಿಂಹಮೂರ್ತಿ ಎಂಬುವರು ಸಲ್ಲಿಸಿದ್ದ ಅರ್ಜಿಯಲ್ಲಿ ಶಶಿಕಲಾಗೆ ಯಾವುದೇ ಐಷಾರಾಮಿ ಸೌಲಭ್ಯ ನೀಡಲಾಗಿಲ್ಲ ಎಂಬ ಮಾಹಿತಿ ನೀಡಿದ್ದಾರೆ. ಶಶಿಕಲಾ ನಟರಾಜನ್ಗೆ ಸಾಮಾನ್ಯ ಕೈದಿಗೆ ನೀಡುವ ಸೌಲಭ್ಯವನ್ನಷ್ಟೇ ನೀಡಲಾಗಿದೆ. ಒಂದು ಸ್ಟೀಲ್ ತಟ್ಟೆ, ಒಂದು ಸ್ಟೀಲ್ ಲೋಟ,ಚೊಂಬು, ಒಂದು ಬೆಡ್ ಕಾರ್ಪೆಟ್,2 ಬೆಡ್ಶೀಟ್, 2 ಕಂಬಳಿ,2 ಜೊತೆ ಬಿಳಿ ಸೀರೆ, ಲಂಗ, ರವಿಕೆ ಮಾತ್ರ ನೀಡಲಾಗಿದೆ ಎಂದಿದ್ದಾರೆ
ಇದಲ್ಲದೇ ಶಶಿಕಲಾ ಯಾವುದೇ ಇತರ ವಸ್ತುಗಳನ್ನು ಖರೀದಿಸಿಲ್ಲ ಎಂಬ ಉತ್ತರವನ್ನು ಕೇಂದ್ರ ಕಾರಾಗೃಹದ ಅಧಿಕಾರಿಗಳು ಆರ್ಟಿಐ ಅಡಿ ಮಾಹಿತಿಯನ್ನು ನೀಡಿದ್ದಾರೆ.
ಪರಪ್ಪನ ಅಗ್ರಹಾರ ಜೈಲಲ್ಲಿ ಶಶಿಕಲಾಗೆ ರಾಜಾತಿಥ್ಯ ನೀಡಲಾಗಿದೆ ಎಂದು ಡಿಐಜಿ ರೂಪಾ ಆರೋಪ ಮಾಡಿದ್ದರು. ಇದಾದ ನಂತರ ನಿವೃತ್ತ ಐಎಎಸ್ ಅಧಿಕಾರಿ ವಿನಯ್ ಕುಮಾರ್ ನೇತೃತ್ವದಲ್ಲಿ ತನಿಖೆಗೆ ಆದೇಶ ನೀಡಲಾಗಿತ್ತು.