ಸುಳ್ಯ, ಫೆ. 20 (DaijiworldNews/TA): ಆಲೆಟ್ಟಿಯ ಪಂಜಿಮಲೆ ಶ್ರೀವಿಷ್ಣುಮೂರ್ತಿ ದೈವದ ಒತ್ತೆಕೋಲವು ಫೆ.18,19ರಂದು ಜರುಗಿತು. ಪೂರ್ವಾಹ್ನ ದೇವಳದ ಅರ್ಚಕರಾದ ಹರ್ಷಿತ್ ಬನ್ನಿಂತಾಯರವರ ನೇತೃತ್ವದಲ್ಲಿ ಗಣಪತಿ ಹವನವಾಗಿ ಬಳಿಕ ಉಗ್ರಾಣ ತುಂಬುವ ಕಾರ್ಯಕ್ರಮ ನಡೆಯಿತು.

ಅದೇ ದಿನ ಸಂಜೆ ಗುಂಡ್ಯ ಶ್ರೀವಯನಾಟ್ ಕುಲವನ್ ದೈವಸ್ಥಾನದಿಂದ ವಿಷ್ಣುಮೂರ್ತಿ ದೈವದ ಪಾತ್ರಿಯರ ನೇತೃತ್ವದಲ್ಲಿ ಭಂಡಾರ ಆಗಮಿಸಿದ ನಂತರ ದರ್ಶನ ಪಾತ್ರಿಯವರಿಂದ ಮೇಲೇರಿಗೆ ಅಗ್ನಿಸ್ಪರ್ಶವಾಯಿತು.