ಮಂಗಳೂರು, ಫೆ. 21 (DaijiworldNews/TA): ಶಿವ ಪಂಚಾಕ್ಷರಿ ಪಂಚಲಕ್ಷ ಯಜ್ಞದಲ್ಲಿ ರೆಮೋನಾ ಇವೆಟ್ ಪಿರೇರಾ ಅವರಿಂದ ಅದ್ಭುತ ನಾಟ್ಯ ಸೇವೆ ನಡೆಯಿತು.

ಮಂಗಳೂರು ಓಂ ಶ್ರೀಮಠದ ಮಾತಾ ಶ್ರೀ ಓಂ ಶ್ರೀ ಮಠದ ಅಮ್ಮನವರ ಒಂದು ಕೋಟಿ ಶಿವಪಂಚಾಕ್ಷರಿ ಜಪ ಸಮರ್ಪಣೆ ಹಾಗೂ ಶಿವ ಪಂಚಾಕ್ಷರಿ ಯಜ್ಞದ ತೃತೀಯ ದಿನವಾದ ಫೆ.20ರಂದು ರೆಮೋನ ಪಿರೇರಾ ಅವರಿಂದ ನೃತ್ಯಸೇವೆ ನಡೆಯಿತು. ನಂತರ ಓಂ ಶ್ರೀ ಮಠದಿಂದ ವಿಶೇಷವಾದ ಗೌರವಾರ್ಪಣೆಯನ್ನು ನೀಡಲಾಯಿತು.
23 ವರ್ಷದ ಭರತನಾಟ್ಯ ನೃತ್ಯಗಾರ್ತಿ ರೆಮೋನಾ ಇವೆಟ್ ಪಿರೇರಾ ಏಳು ದಿನಗಳ ಅವಧಿಯಲ್ಲಿ 170 ಗಂಟೆಗಳ ಕಾಲ ನಿರಂತರವಾಗಿ ನೃತ್ಯ ಮಾಡುವ ಮೂಲಕ ಹೊಸ ವಿಶ್ವ ದಾಖಲೆಯನ್ನು ಸೃಷ್ಟಿಸಿದವರು. ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರವನ್ನು ಪಡೆದವರು.