ಮಂಗಳೂರು, ಜು30(Daijiworld News/SS): ತುಳುವೆರೆ ಆಯನೊ ಕೂಟ ಕುಡ್ಲ ಮತ್ತು ಹೊಟೇಲ್ ಡಿಂಕಿ ಡೈನ್ ಇವರ ಸಹಯೋಗತ್ವದಲ್ಲಿ "ಆಟಿ ಅಮಾವಾಸೆದ ಮರ್ದ್ - ಗಂಜಿ ಪಟ್ಟುನ ಲೇಸ್" ಎಂಬ ವಿಶೇಷ ಕಾರ್ಯಕ್ರಮ ಆಗಸ್ಟ್ 1ರಂದು ಡಿಂಕಿ ಡೈನ್ ಸಭಾಂಗಣದಲ್ಲಿ ನಡೆಯಲಿದೆ.
"ಆಟಿ ಅಮಾವಾಸೆದ ಮರ್ದ್ - ಗಂಜಿ ಪಟ್ಟುನ ಲೇಸ್" ವಿಶೇಷ ಕಾರ್ಯಕ್ರಮದಲ್ಲಿ ಖ್ಯಾತ ಜನಪದ ವಿದ್ವಾಂಸ ದಯಾನಂದ್ ಕತ್ತಲ್'ಸಾರ್ ಅವರ ಆಷಾಢ ಮಾಸದ ವೈಶಿಷ್ಟ್ಯವನ್ನು ಸಾರುವ "ಆಟಿ" ಎಂಬ ಹೆಸರಿನ ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದೆ.
ಈ ವಿಶೇಷ ಕಾರ್ಯಕ್ರಮದಲ್ಲಿ ಏರ್ಯ ಲಕ್ಷ್ಮೀ ನಾರಾಯಣ ಆಳ್ವ, ಶ್ರೀ ಗುರುಪ್ರಸಾದ್, ಶ್ರೀ ಹರ್ಷ ಐಎಎಸ್, ಡಾ. ಆರೂರು ಪ್ರಸಾದ್ ರಾವ್, ಶ್ರೀ ಪ್ರಸನ್ನ ಶೆಣೈ, ಶ್ರೀ ಪುರುಷೋತ್ತಮ ದತ್ತನಗರ, ಶ್ರೀ ಚಂದ್ರಶೇಖರ ರೈ, ಶ್ರೀ ಕಿರಣ್ ಜೋಗಿ, ಶ್ರೀ ಯೋಗಿಶ್ ಶೆಟ್ಟಿ ಜೆಪ್ಪು, ಶ್ರೀ ಜನಾರ್ದನ ಅರ್ಕುಳ, ಶ್ರೀ ಗುರುಕಿರಣ್ ಮತ್ತು ಮಾ. ತಕ್ಷಿಲ್ ದೇವಾಡಿಗ ಪಾಲು ಪಡೆಯಲಿದ್ದಾರೆ.