ಕಡಬ, ಫೆ. 21 (DaijiworldNews/AA): ತಾಲೂಕಿನ ಕೊಂಬಾರುಸಿರಿಬಾಗಿಲು ಮತ್ತು ಕೈಕಂಬ ಪರಿಸರದಲ್ಲಿ ಗುರುವಾರ ರಾತ್ರಿ ಮತ್ತು ಶುಕ್ರವಾರ ಮುಂಜಾನೆ ತುಂತುರು ಮಳೆಯಾಗಿದ್ದು, ಮಳೆಹನಿ ಬಿದ್ದ ಜಾಗಗಳಲ್ಲಿ ಹಳದಿ ಬಣ್ಣದ ಚುಕ್ಕೆಗಳು ಕಂಡುಬಂದಿರುವುದು ಸ್ಥಳೀಯರಲ್ಲಿ ಆಶ್ಚರ್ಯ ಮೂಡಿಸಿದೆ.

ಗುರುವಾರ ರಾತ್ರಿ ತುಂತುರಯ ಮಳೆಯಾಗಿದ್ದು ಜನರ ಗಮನಕ್ಕೆ ಬಂದಿರಲಿಲ್ಲ. ಆದರೆ, ಶುಕ್ರವಾರ ಬೆಳಿಗ್ಗೆ ಎದ್ದು ನೋಡಿದಾಗ ಮನೆಗಳ ಅಂಗಳ, ಗಿಡಮೂಲೆಗಳು ಹಾಗೂ ಹೊರಗಡೆ ಒಣಗಲು ಹಾಕಿದ್ದ ಬಟ್ಟೆಗಳ ಮೇಲೆ ಹಳದಿ ಬಣ್ಣದ ಚುಕ್ಕೆಗಳು ಕಂಡುಬಂದಿದೆ.
ಈ ಚುಕ್ಕೆಗಳು ಒಣಗಿದ ನಂತರ, ಹತ್ತಿಯಿಂದ ಒರೆಸಿದಾಗ ಹಳದಿ ಬಣ್ಣದ ಪುಡಿಯಂತೆ ಕಂಡುಬಂದಿದೆ. ಕೇವಲ ಒಂದು ಭಾಗದಲ್ಲಿ ಮಾತ್ರವಲ್ಲದೆ, ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲೂ ಇದೇ ರೀತಿಯ ಹಳದಿ ಚುಕ್ಕೆಗಳು ಕಂಡುಬಂದಿವೆ.
ವಿಷಯ ತಿಳಿಯುತ್ತಿದ್ದಂತೆಯೇ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಹಳದಿ ಬಣ್ಣದ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಪ್ರಯೋಗಾಲಯದ ವರದಿ ಬಂದ ನಂತರವಷ್ಟೇ ಇದರ ನಿಖರ ಕಾರಣ ತಿಳಿದುಬರಬೇಕಿದೆ.