ಮುಂದಿನ ಲೋಕಸಭಾ ಚುನಾವಣೆಯ ಮುನ್ನೋಟ ಎಂದೇ ಪರಿಗಣಿಸಲಾಗುವ ಗುಜರಾತ್ ವಿಧಾನಸಭಾ ಚುನಾವಣೆಯ ಮತ ಎಣಿಕೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಗಳಿಸುವ ಸೂಚನೆಗಳು ಗೋಚರಿಸುತ್ತಿವೆ. ಗುಜರಾತ್ನಲ್ಲಿ ಆಡಳಿತರೂಢ ಬಿಜೆಪಿ ಸತತ 6ನೇ ಗೆಲುವಿನತ್ತ ಮುನ್ನಡೆಯುತ್ತಿದ್ದು, 105 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಆದರೂ ಕಾಂಗ್ರೇಸ್ ಪ್ರಬಲ ಪೈಪೋಟಿ ನೀಡಿದ್ದನ್ನು ತಳ್ಳಿ ಹಾಕುವಂತಿಲ್ಲ. ಇತ್ತೀಚಿನ ವರದಿ ಪ್ರಕಾರ ಕಾಂಗ್ರೆಸ್ 72 ಕ್ಷೇತ್ರದಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಗುಜರಾತ್ನಲ್ಲಿ ಮೋದಿ ಅಲೆಯ ಮುಂದೆ ರಾಹುಲ್ ಗಾಂಧಿಯ ಮ್ಯಾಜಿಕ್ ವೈಫಲ್ಯವಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಇತ್ತ ಹಿಮಾಚಲಪ್ರದೇಶದಲ್ಲೂ ಬಿಜೆಪಿ ಸ್ಪಷ್ಟ ಬಹುಮತ ಗಳಿಸಿರುವುದು ಬಹುತೇಕ ಖಚಿತವಾಗಿದ್ದು, 45 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಗುಜರಾತ್ ನಲ್ಲಿ ಬಿಜೆಪಿ ಗೆಲುವು ಖಚಿತವಾಗುತ್ತಿದ್ದಂತೆ ಬಿಜೆಪಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದು, ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ.