ಬಂಟ್ವಾಳ, ಆ 4 (Daijiworld News/RD): ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರಿಸಿಕೊಂಡಿದ್ದ ವಾರೆಂಟ್ ಆರೋಪಿತೆ ನೇತ್ರಾ ಅವರನ್ನು ಆ 3 ಶನಿವಾರದಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸರು ವಶಪಡಿಸಿಕೊಂಡಿದ್ದಾರೆ.
37 ವರ್ಷದ ಆರೋಪಿತೆ ನೇತ್ರ, ನೇತ್ರಾವತಿ, ನೇತ್ರಮ್ಮ ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದು, ಶಿವಮೊಗ್ಗ ಜಿಲ್ಲೆಯ, ಮತ್ತೂರಿನ, ಮಡಿಕೆ ಕಟ್ಟೆಯ ನಿವಾಸಿ. ಈಕೆಯ ಗಂಡ ಆನಂದ ಕೊರಮ.
ಈಕೆಯ ವಿರುದ್ದ ಬಂಟ್ವಾಳ ನಗರ ಠಾಣೆಯಲ್ಲಿ ಎರಡು ಕೇಸು, ಉಪ್ಪಿನಂಗಡಿ, ,ಬೆಳ್ತಂಗಡಿ, ಪೂಂಜಾಲಕಟ್ಟೆ, ಸುಳ್ಯ, ಗಂಗೊಳ್ಳಿ, ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯಲ್ಲಿ ಒಂದು ಪ್ರಕರಣಗಳು ದಾಖಲಾಗಿರುತ್ತವೆ.
ಈ ಪ್ರಕರಣದಲ್ಲಿ ಜಾಮೀನುದಾರನಾಗಿದ್ದ ರಾಜೇ ಸಾಹೇಬ್ ನದಾಪ್ ಇವರನ್ನು ಬೆಳಗಾವಿಯ ಹುಕ್ಕೇರಿ ತಾಲೂಕಿನ ಕರಗಡ ಗ್ರಾಮದಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈತನ ತಂದೆ ದೇವೆಗೌಡನ ಹಟ್ಟಿ, ತಾಯಿ ಮೀರಾ ಸಾಹೇಬ್. ಬಂಧಿತ ಆರೋಪಿ ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನವನಾಗಿದ್ದು, ಈಗಾಗಲೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.