ಮಂಗಳೂರು, ಆ 4 (Daijiworld News/RD): ನಗರದ ತನ್ನೀರುಭಾವಿಯಲ್ಲಿ ಮೀನುಗಾರಿಕೆ ಮಾಡುತ್ತಿದ್ದ ದೋಣಿ ಸಮುದ್ರದ ಹೆಚ್ಚಿನ ಅಲೆಗಳಿಂದಾಗಿ ಮಗುಚಿದ ಘಟನೆ ಉಂಟಾಗಿದೆ. ಆಗಸ್ಟ್ 3 ರ ಶನಿವಾರ ಈ ಘಟನೆ ಸಂಭವಿಸಿದೆ. ಅದೃಷ್ಟವಶಾತ್ ದೋಣಿಯಲ್ಲಿದ್ದ ಎಲ್ಲಾ ಒಂಬತ್ತು ಜನ ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಮುದ್ರದ ಅಲೆಗಳು ಹೆಚ್ಚುತ್ತಿರುವುದರಿಂದ ಈ ಅಲೆಗಳು ದೋಣಿಯನ್ನು ಸುತ್ತುವರಿದು ಮಗುಚಿ ಹಾಕಿದ್ದು, ಇದನ್ನು ಮತ್ತೊಂದು ಮೀನುಗಾರಿಕಾ ದೋಣಿ ತಕ್ಷಣ ರಕ್ಷಿಸಿತು. ಶಬ್ಬೀರ್, ನಾಸಿರ್, ರಿಯಾಜ್, ಆಶಿಕ್, ಲಕ್ಷ್ಮಣ್, ಎಲ್ ಆರ್ ರಾವ್, ಕೃಷ್ಣ, ಗುರು ಮತ್ತು ಪವನ್ ದೋಣಿಯಲ್ಲಿದ್ದ ಮೀನುಗಾರರು. 'ಶಬ್ಬೀರ್' ಹೆಸರಿನ ಈ ದೋಣಿ ಬೆಳಿಗ್ಗೆ 7.45 ರ ಸುಮಾರಿಗೆ ತನ್ನಿರುಭಾವಿ ಬೀಚ್ ಬಳಿ ಮೀನುಗಾರಿಕೆ ನಡೆಸುತ್ತಿತ್ತು. ಇದ್ದಕ್ಕಿದ್ದಂತೆ ಸಮುದ್ರದಲ್ಲಿ ಹೆಚ್ಚಿನ ಗಾಳಿ ಸಂಬವಿಸಿತು ಇದರಿಂದಾಗಿ ಸಮುದ್ರದಲ್ಲಿಎತ್ತರದ ಅಲೆಗಳು ಕಾಣಿಸಿಕೊಂಡವು, ಹೀಗಾಗಿ ದೋಣಿ ಮಗುಚಿ ಬಿದ್ದು ಎಲ್ಲಾ ಒಂಬತ್ತು ಜನರನ್ನು ಸಮುದ್ರಕ್ಕೆ ಎಸೆಯಲ್ಪಟ್ಟಿತು.
ಸಮೀಪದಲ್ಲಿ ಇದ್ದ ಮೀನುಗಾರರ ತಂಡ ಈ ಘಟನೆಯನ್ನು ಗಮನಿಸಿ ’ಸುವರ್ಣ ಕುಸುಮಾ’ ಮತ್ತು ’ಶ್ರೀ ರಾಮ’ ಎಂಬ ಎರಡು ದೋಣಿಗಳು ತಕ್ಷಣ ಕಾರ್ಯರೂಪಕ್ಕೆ ಬಂದು ಜನರನ್ನು ರಕ್ಷಿಸುವಲ್ಲಿ ಯಶಸ್ವಿಯಯಿತು. ಮುಳುಗಿದ 'ಶಬ್ಬೀರ್' ದೋಣಿಯನ್ನು ಸ್ಥಳೀಯರ ಸಹಾಯದಿಂದ ದಡಕ್ಕೆ ತರಲಾಗಿದ್ದು, ದೋಣಿಯಲ್ಲಿದ್ದ ಎಲ್ಲಾ ಮೀನುಗಾರರು ಸುರಕ್ಷಿತ ಎಂದು ಹೇಳಲಾಗಿದೆ.