ಬಂಟ್ವಾಳ, ಆ 4 (Daijiworld News/RD): ಬಟ್ಟೆಯನ್ನು ಒಣಗಲು ಹಾಕುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಕರೆಂಟ್ ಶಾಕ್ ಹೊಡೆದು ಮಹಿಳೆ ಮೃತಪಟ್ಟಿರುವ ಘಟನೆ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಜನತಾಗೃಹದಲ್ಲಿ ನಡೆದಿದೆ.
ಮನೆಯ ಸಮೀಪದ ಕೊಟ್ಟಿಗೆಯಲ್ಲಿ ತಂತಿಯ ಮೇಲೆ ಬಟ್ಟೆಯನ್ನು ಒಣಗಲು ಹಾಕುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ವಿದ್ಯುತ್ ಸ್ಪರ್ಶವಾದ ತಕ್ಷಣ ಮಹಿಳೆ ಕಿರುಚಿದ್ದು, ಕೂಡಲೇ ಸಹಾಯಕ್ಕೆ ಧಾವಿಸಿದ ಗಂಡ ಆಕೆಯನ್ನು ಹಿಡಿದೆಳೆದು ರಕ್ಷಿಸಲು ಮುಂದಾದರು, ಹೀಗಾಗಿ ಗಂಡನಿಗೂ ವಿದ್ಯುತ್ ಶಾಕ್ ಸಂಭವಿಸಿತು. ಆ ಹೊತ್ತಿಗೆ ಆಕೆಯ ಕೈ ತಂತಿಯಿಂದ ಸರಿದಿದ್ದ ಕಾರಣ ಗಂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಹಿಳೆಯನ್ನು ಕೂಡಲೆ ಸಮೀಪದ ಬಿ.ಸಿ.ರೋಡಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ಅಲ್ಲಿಗೆ ತಲುಪುವ ಮೊದಲೇ ಹೋಗುವ ದಾರಿಯಲ್ಲಿ ಅಸುನೀಗಿದ್ದಾರೆ ಎಂದು ವೈದ್ಯರು ತಿಳಿಸಿದರು. ಈಗಾಗಲೇ ಘಟನೆಯ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಾಲಾಗಿದೆ.