ಮಂಗಳೂರು, ಆ 04 (DaijiworldNews/SM): ಚಾಲಕನ ನಿಯಂತ್ರಣ ಕಳೆದು ಖಾಸಗಿ ಬಸ್ ಡಿವೈಡರ್ ಏರಿದ್ದು, ಮಗು ಸೇರಿದಂತೆ ನಾಲ್ವರು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಮಂಗಳೂರಿನ ಲಾಲ್ ಬಾಗ್ ಐಸ್ ಕ್ರೀಂ ಪಾರ್ಲರ್ ಬಳಿ ನಡೆದಿದೆ.
ಬಾಗಲಕೋಟೆಯ ಜಮಖಂಡಿ ನಿವಾಸಿ ಕರಿಯಪ್ಪ, ಕೊಡಿಯಾಲ್ ಬೈಲ್ ನಿವಾಸಿ ಕಿರಣ್, ಸ್ಥಳೀಯ ನಿವಾಸಿ ಶಂಕರ್, ಹಾಗೂ 2ರ ಹರೆಯದ ಮಗು ಶರತ್ ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಘಟನೆ ನಡೆಯುತ್ತಿದ್ದಂತೆ ಬಸ್ ಚಾಲಕ ಪರಾರಿಯಾಗಿದ್ದಾನೆ. ಅತಿಯಾದ ವೇಗವೇ ಘಟನೆಗೆ ಕಾರಣ ಎನ್ನಲಾಗಿದೆ. ಖಾಸಗಿ ಬಸ್ ತಣ್ಣೀರುಬಾವಿಯಿಂದ ಪಿವಿಎಸ್ ಮಾರ್ಗವಾಗಿ ಸ್ಟೇಟ್ ಬ್ಯಾಂಕ್ ತೆರಳುತ್ತಿತ್ತು ಎಂದು ತಿಳಿದುಬಂದಿದೆ.
ಮಂಗಳೂರು ಸಂಚಾರ ಪಶ್ಚಿಮ(ಕದ್ರಿ) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.