ಕುಂದಾಪುರ,ಆ 5 (Daijiworld News/RD): ಚಲಿಸುತ್ತಿದ್ದ ಸ್ಕೂಟರ್ಗೆ ಹಿಂಬದಿಯಿಂದ ಬಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆಸೆಯಲ್ಲಪಟ್ಟ ಸ್ಕೂಟರ್ ಸವಾರರಲ್ಲಿ ಹಿಂಬದಿ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದರೆ ಸವಾರ ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾದ ಘಟನೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕೋಟೇಶ್ವರ ಬೈಪಾಸ್ ಸಮೀಪ ಭಾನುವಾರ ರಾತ್ರಿ ನಡೆದಿದೆ.
ಅಪಘಾತದಲ್ಲಿ ಸಾವನ್ನಪ್ಪಿದ ಹಿಂಬದಿ ಸವಾರನನ್ನು ಸಾಲಿಗ್ರಾಮದ ನಿವಾಸಿ ವಿವೇಕ್ ಎಂದು ಗುರುತಿಲಾಗಿದ್ದು, ಗಂಭೀರ ಗಾಯಗೊಂಡಿರುವ ಬೈಕ್ ಸವಾರನನ್ನು ಸಾಲಿಗ್ರಾಮದ ನಿವಾಸಿ ಶರಣ್ರಾಜ್ ಎಂದು ಗುರುತಿಸಲಾಗಿದೆ.ಬೈಕ್ ಸವಾರರಿಬ್ಬರೂ ಕುಂದಾಪುರದ ಪೈ ಇಂಟರ್ನ್ಯಾಷನಲ್ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದರು. ಭಾನುವಾರ ರಾತ್ರಿ ಕೆಲಸ ಮುಗಿಸಿ ಸ್ಕೂಟರಿನಲ್ಲಿ ಮನೆಗೆ ಪ್ರಯಾಣಿಸುತ್ತಿದ್ದರು. ಕೋಟೇಶ್ವರ ಎಂಬ್ಯಾಕ್ಮೆಂಟ್ನಲ್ಲಿ ಚಲಿಸಿ ಸುಮಾರು ಮುನ್ನೂರು ಮೀಟರ್ ದೂರ ಬರುತ್ತಿದ್ದ ವೇಳೆ ಹಿಂಬದಿಯಿಂದ ಸರಕು ತುಂಬಿದ ಲಾರಿಯೊಂದು ಅತಿ ವೇಗವಾಗಿ ಬಂದು ಹಿಂಬದಿಯಿಂದ ಸ್ಕೂಟರ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟರಿನಲ್ಲಿದ್ದ ಇಬ್ಬರೂ ಹೆದ್ದಾರಿಗೆ ಎಸೆಯಲ್ಪಟ್ಟಿದ್ದಾರೆ.
ಇದೇ ಸಂದರ್ಭ ಅಪಘಾತ ನಡೆಸಿದ ಲಾರಿ ವೇಗ ನಿಯಂತ್ರಿಸಲಾಗದೇ ಮುಂದಕ್ಕೆ ಚಲಿಸಿದೆ. ಹೆದ್ದಾರಿಯಲ್ಲಿ ಬಿದ್ದಿದ್ದ ಹಿಂಬದಿ ಸವಾರ ವಿವೇಕ್ ದೇಹದ ಮೇಲೆ ಲಾರಿಯ ಚಕ್ರಗಳು ಹತ್ತಿ ಹೋಗಿವೆ. ಪರಿಣಾಮವಾಗಿ ಸಂಪುರ್ಣ ನುಜ್ಜುಗುಜ್ಜಾದ ವಿವೇಕ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಬೈಕ್ ಚಲಾಯಿಸುತ್ತಿದ್ದ ಶರಣ್ರಾಜ್ ಗಂಭೀರ ಗಾಯಗೊಂಡಿದ್ದು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತಕ್ಕೆ ಕಾರಣವಾದ ಲಾರಿ ಚಾಲಕ ಲಾರಿಯನ್ನು ಅಲ್ಲಿಯೇ ಬಿಟ್ಟು, ತಲೆ ಮರೆಸಿಕೊಂಡಿದ್ದಾನೆ. ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.